ಕೊಳ್ಳೇಗಾಲದಲ್ಲಿ ಬೃಹತ್ ಶೋಭಾಯಾತ್ರೆ

  ಕೊಳ್ಳೇಗಾಲದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಅವರಿಗೆ ರಮೇಶ್ ಮುರಾರಿ ಸೇರಿದಂತೆ ಇತರರು ತಾಂಬೂಲ ಸಮೇತ ಆಹ್ವಾನ ಪತ್ರಿಕೆ ನೀಡುವ  ಮೂಲಕ ಹಿಂದೂ ಸಮಾಜೋತ್ಸವಕ್ಕೆ ಆಹ್ವಾನಿಸಿದರು.
ಕೊಳ್ಳೇಗಾಲದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಅವರಿಗೆ ರಮೇಶ್ ಮುರಾರಿ ಸೇರಿದಂತೆ ಇತರರು ತಾಂಬೂಲ ಸಮೇತ ಆಹ್ವಾನ ಪತ್ರಿಕೆ ನೀಡುವ ಮೂಲಕ ಹಿಂದೂ ಸಮಾಜೋತ್ಸವಕ್ಕೆ ಆಹ್ವಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಸಮಾಜೋತ್ಸವ ಸಮಿತಿ
  • ಸಮಿತಿ ಅಧ್ಯಕ್ಷ ರಮೇಶ್ ಮುರಾರಿ
ಕೊಳ್ಳೇಗಾಲ: ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಪಟ್ಟಣದಲ್ಲಿ ಜ.31ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆ ಮತ್ತು ಸಮಾಜೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗುರುವಾರ ಸಮಿತಿ ಸದಸ್ಯರು ಹಿಂದೂ ಸಮುದಾಯಗಳ ಮುಖಂಡರು ಹಾಗು ಕುಲಬಾಂಧವರಿಗೆ ನೀಡಿ ಆಹ್ವಾನಿಸಿದರು.
ಸಮಿತಿ ಅಧ್ಯಕ್ಷ ರಮೇಶ್ ಮುರಾರಿ ಮಾತನಾಡಿ, ಜ.31ರಂದು ಬೆಳಗ್ಗೆ 10 ಗಂಟೆಗೆ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯ ಮುಂಭಾಗ ಶೋಭಾಯಾತ್ರೆ ಆರಂಭವಾಗಲಿದೆ. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿಲಿದ್ದು, ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಅಂತಿಮವಾಗಿ ಚೌಡೇಶ್ವರಿ ಕಲ್ಯಾಣ ಮಂಟಪ ತಲುಪಿ ನಂತರ ಸಮಾಜೋತ್ಸವ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ದೇವಾಂಗ ಸಮಾಜದ ಯಜಮಾನ ಅಚ್ಗಾಳ್ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಶ್ರೀಸ್ವಾಮಿ ಮರಳಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಹಿಂದೂ ಸಂಪ್ರದಾಯದ ಪ್ರಕಾರ ಹಿಂದೂ ಸಮಾಜದ ಎಲ್ಲ ಸಮುದಾಯದ ಯಜಮಾನರು, ಮುಖಂಡರಿಗೆ ತಾಂಬೂಲ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಲ್ಲದೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ವರ್ತಕರ ಸಂಘ, ಆಟೋ ಚಾಲಕ ಸಂಘಗಳ ಮುಖಂಡರುಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದರು.
ಸಮಿತಿ ಕೋಶಾಧ್ಯಕ್ಷ ಮಧುಸೂದನ್, ಸಂಯೋಜಕ ಶಿವಕುಮಾರ್ ಬೂದಿತಿಟ್ಟು, ಮುಖಂಡರಾದ ಲಿಂಗಣಾಪುರ ಬಸವರಾಜಪ್ಪ, ಶಂಕರ್, ಡೈರಿ ಗಿರೀಶ್, ರವಿ ಕುಣಗಳ್ಳಿ, ಡಾ. ಲೋಕೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net