ಅಪಘಾತದಲ್ಲಿ ದಂಪತಿಗೆ ಗಾಯ

ಆರ್.ಎಸ್ ದೊಡ್ಡಿ ಬಳಿ ಬೈಕ್ ಡಿಕ್ಕಿಯಿಂದ ಗಾಯಗೊಂಡ ದಂಪತಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆ ಸಾಗಿಸಲಾಯಿತು.
ಆರ್.ಎಸ್ ದೊಡ್ಡಿ ಬಳಿ ಬೈಕ್ ಡಿಕ್ಕಿಯಿಂದ ಗಾಯಗೊಂಡ ದಂಪತಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆ ಸಾಗಿಸಲಾಯಿತು.
Published on

ಹನೂರು:

ಪಟ್ಟಣದ ಆರ್.ಎಸ್.ದೊಡ್ಡಿಯ ಪೆಟ್ರೋಲ್ ಬಂಕ್ ಮುಂಭಾಗ ಮಂಗಳವಾರ ಸಂಭವಿಸಿದ ಬೈಕ್ ಅಪಘಾತದಲ್ಲಿ ದಂಪತಿ ಗಾಯಗೊಂಡಿದ್ದಾರೆ.

ಹನೂರಿನಲ್ಲಿ ವಾಸವಿರುವ, ತಾಲೂಕಿನ ಗಾಣಿಗಮಂಗಲ ಗ್ರಾಮದ ಮುತ್ತಯ್ಯ(54), ಪದ್ಮಾ (45) ಗಾಯಗೊಂಡವರು. ಬೆಳಗ್ಗೆ 9ರಲ್ಲಿ ಕಾರ್ಯನಿಮಿತ್ತ ಹನೂರಿನಿಂದ ಕೊಳ್ಳೇಗಾಲದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಮತ್ತೊಂದು ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಮುತ್ತಯ್ಯ ದಂಪತಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಇಬ್ಬರನ್ನು ತುರ್ತು ವಾಹನದ ಮೂಲಕ ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರವಾಗಿ ಗಾಯಗೊಂಡಿದ್ದ ಮುತ್ತಯ್ಯ ಅವರನ್ನು ಮೈಸೂರು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹನೂರು ಪೊಲೀಸರು ಆಗಮಿಸಿ, ಅಪಘಾತಕ್ಕೆ ಕಾರಣವಾದ ಬೈಕ್ ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net