ಜಿಲ್ಲೆಯ ಪಡಗೂರು ಮಠ, ಮೂಡಗೂರು ಮಠ, ಮರಿಯಾಲದ ಶ್ರೀಮುರುಘರಾಜೇಂದ್ರಸ್ವಾಮಿ ಮಠ, ಹುರಳಿನಂಜನಪುರ, ನಂಜದೇವನಪುರ, ತೆರಕಣಾಂಬಿ ಗ್ರಾಮದ ಶನೇಶ್ವರಸ್ವಾಮಿ ದೇವಾಲಯ, ಕಬ್ಬಹಳ್ಳಿ ಮಠ, ಕುಂತೂರು ಮಠ, ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ದಡದಹಳ್ಳಿ ಮಠ, ಚಿಲಕವಾಡಿ ಮಠ, ಕುಂದೂರು ಮಠ, ಶಂಭುಲಿಂಗೇಶ್ವರಸ್ವಾಮಿ ಬೆಟ್ಟ ಹಾಗೂ ಇನ್ನಿತರೆ ಕಡೆಗಳಲ್ಲಿ ಒಟ್ಟು 50 ಕ್ಕಿಂತಲೂ ಹೆಚ್ಚು ತಾಳೆಗರಿಗಳನ್ನು ಸಂಗ್ರಹ ಮಾಡಿದ್ದಾರೆ. ಇದರೊಂದಿಗೆ ಓಲೆಗರಿಗಳು, ವಿವಿಧ ತಾಮ್ರ ಶಾಸನಗಳು ಹಾಗೂ ಅಪರೂಪದ ಕೈಬರಹಗಳನ್ನು ಸಂಗ್ರಹಿಸಿದ್ದಾರೆ. ಈ ಕಾರ್ಯಕ್ಕೆ ಡಾ.ಜಯಣ್ಣ ಅವರು ಸ್ವತಃ ತಾವೇ ಖರ್ಚು ಭರಿಸುತ್ತಿದ್ದು, ಓರ್ವ ಇತಿಹಾಸ ಪ್ರಾಧ್ಯಾಪಕನಾಗಿ ಇದು ನನ್ನ ಕರ್ತವ್ಯ ಎಂದು ಹೇಳಿಕೊಳ್ಳುತ್ತಾರೆ. ಈ ಮೂಲಕ ಇನ್ನು ಹೆಚ್ಚಿನ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಲು ಮುಂದಾಗುತ್ತಿದ್ದಾರೆ.