ಬೆಳಗ್ಗೆ ಪ್ರವಾಸಿ ಮಂದಿರದಿಂದ ಹೊರಬಂದ ಸಾಮೂಹಿಕ ನಾಯಕತ್ವದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಬಿಗ್‌ಕ್ಯಾಟ್ ಶೃಂಗಸಭೆ ಮೇಲ್ನೋಟಕ್ಕೆ ವನ್ಯಜೀವಿಗಳ ಸಂರಕ್ಷಣೆಗಾಗಿ ಎನಿಸಿದರೂ ಇದರ ಹಿಂದೆ ದೊಡ್ಡ ಹುನ್ನಾರವಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಧಿ ಸಂಗ್ರಹ, ಹಣದ ದುರ್ಬಳಕೆ, ಪಾರದರ್ಶಕತೆ ಇಲ್ಲದಿರುವುದು, ಸ್ಥಳೀಯರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದು, ಅಭಿವೃದ್ಧಿ ಹೆಸರಿನಲ್ಲಿ ಗಣಿಗಾರಿಕೆ, ಪ್ರವಾಸೋದ್ಯಮ ಹೆಸರಿನಲ್ಲಿ ವಾಣಿಜ್ಯೀಕರಣದ ಅನುಮಾನಗಳಿವೆ. ಆದ್ದರಿಂದ ಈ ಬಗ್ಗೆ ವಿದೇಶಿ ಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸಬೇಕಾಗಿದೆ ಎಂದು ತಿಳಿಸಿದರು.