

ಪ್ರಮುಖ ಮುಖ್ಯಾಂಶಗಳು
2014ನೇ ಸಾಲಿನಿಂದ ಇಲ್ಲಿಯವರೆ 8424 ಪ್ರಕರಣಗಳಲ್ಲಿ 35098.40 ಎಕರೆ ಒತ್ತುವರಿಯಿಂದ ತೆರವುಗೊಳಿಸಿ ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗಿದೆ. ಅರಣ್ಯ ಭೂಮಿ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ತೆರವಿಗೆ ತಂತ್ರಾಂಶ ಬಳಕೆ ಮಾಡಿಕೊಳ್ಳಲಾಗುತ್ತಿದೆ.
— ಈಶ್ವರ ಖಂಡ್ರೆ, ಅರಣ್ಯ ಸಚಿವ
ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿಯಾಗುತ್ತಿದೆ ಎನ್ನುವುದಕ್ಕಿಂತ ಭೂ ಕಬಳಕೆಯಾಗುತ್ತಿದೆ ಎಂದೇ ಹೇಳಬಹುದಾಗಿದೆ. ಭೂಮಿಯ ಎಲ್ಲ ದಾಖಲೆಗಳ ಪುನರ್‌ಪರಿಶೀಲನೆ ನಡೆಯಬೇಕಾಗಿದೆ. ಒಂದು ವೇಳೆ ದಾಖಲೆ ತಿದ್ದಿದ್ದರೆ ಅಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಅರಣ್ಯ ಭೂಮಿ ಒತ್ತುವರಿ ತೆರವನ್ನು ಚುರುಕಾಗಿ ಮತ್ತು ಕಟ್ಟುನಿಟ್ಟಾಗಿ ಮಾಡಬೇಕೆಂದು ಒತ್ತಾಯಿಸುತ್ತೇನೆ.
— ಪುಣಜನೂರು ದೊರೆಸ್ವಾಮಿ, ಸಾಮಾಜಿಕ ಹೋರಾಟಗಾರ, ಚಾಮರಾಜನಗರ