ಮುತ್ತ್ತುಶೆಟ್ಟಿಯೂರಿನಲ್ಲಿ 3 ಹಸುಗಳು ಅನುಮಾನಾಸ್ಪದ ಸಾವು

ಹನೂರು ತಾಲೂಕಿನ ಮುತ್ತುಶೆಟ್ಟಿಯೂರಿನಲ್ಲಿ ಹಸುಗಳು ಮೃತಪಟ್ಟ ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಡಾ.ಮಂಜುನಾಥ್, ಡಾ.ಸಿದ್ದರಾಜು ಇತರರು ಇದ್ದರು.
ಹನೂರು ತಾಲೂಕಿನ ಮುತ್ತುಶೆಟ್ಟಿಯೂರಿನಲ್ಲಿ ಹಸುಗಳು ಮೃತಪಟ್ಟ ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಡಾ.ಮಂಜುನಾಥ್, ಡಾ.ಸಿದ್ದರಾಜು ಇತರರು ಇದ್ದರು.
Published on
ಹನೂರು: ತಾಲೂಕಿನ ರಾಮಾಪುರ ಸಮೀಪದ ಮುತ್ತುಶೆಟ್ಟಿಯೂರಿನಲ್ಲಿ ಬುಧವಾರ 3 ಹಸುಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಗ್ರಾಮದ ರಮೇಶ್ ಎಂಬುವರು ಎಂದಿನಂತೆ 3 ಹಸುಗಳನ್ನು ಹೊರವಲಯದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ದಿಢೀರ್ ನಿತ್ರಾಣಗೊಂಡ ಹಸುಗಳು ಕುಸಿದು ಸ್ಥಳದಲ್ಲೇ ಮೃತಪಟ್ಟಿವೆ. ಈ ಬಗ್ಗೆ ರಮೇಶ್ ಅವರು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಇಲಾಖೆಯ ಉಪ ನಿರ್ದೇಶಕ ಡಾ.ಮಂಜುನಾಥ್ ಹಾಗೂ ತಾಲೂಕು ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಅವರು ಪರಿಶೀಲಿಸಿದರು.
ಬಳಿಕ ಮೃತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೇಲ್ನೋಟಕ್ಕೆ ವಿಷಪೂರಿತ ಆಹಾರ ಇಲ್ಲವೇ ನೀರಿನ ಸೇವನೆಯೇ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ. ಅಂಗಾಂಗ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಹಸುಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net