ಜೂಜಾಡುತ್ತಿದ್ದ 16 ಜನರ ಬಂಧನ

crime
crime
Published on
ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಪಾರ್ಟಿ ಹಾಲ್‌ನಲ್ಲಿ ಜೂಜಾಡುತ್ತಿದ್ದ 16 ಜನರನ್ನು ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 48,430 ರೂ. ವಶಕ್ಕೆ ಪಡೆದಿದ್ದಾರೆ.
ನರಸೀಪುರದ ಬಸವರಾಜು, ಪರಿಣಾಮಿಪುರದ ಮಲ್ಲಿಕಾರ್ಜುನಸ್ವಾಮಿ, ಬೆಂಗಳೂರಿನ ಮಂಜು, ಜ್ಯೋತಿ ಲಿಂಗಯ್ಯ, ವೆಂಕಟೇಶ, ವೀರಭದ್ರಯ್ಯ, ಯೋಗೇಶ್, ವಿಶಾಲ್, ನಂಜೇಗೌಡ, ಮಂಜು ನಾಥ, ಪ್ರವೀಣ್, ರಂಗಸ್ವಾಮಿ, ಕೃಷ್ಣಮೂರ್ತಿ, ಕಿರಣ್, ಅಶೋಕ್ ಕುಮಾರ್, ಇಬ್ರಾಹಿಂ ಬಂಧಿತರು.
ಬಂಧಿತರು ಶಿವನಸಮುದ್ರ ಗ್ರಾಮದ ಶಿಂಷಾ ಮಾರಮ್ಮನ ದೇವಾಲಯಕ್ಕೆ ಆಗಮಿಸಿದ್ದು ಈ ವೇಳೆ ಪಾರ್ಟಿ ಹಾಲ್ವೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐ ಸುಪ್ರೀತ್, ಎಚ್.ಸಿ ಶಾಂತರಾಜು, ಕಾನ್‌ಸ್ಟೆಬಲ್ ಶಂಕರ್, ರಾಜೇಶ್, ದುಂಡಪ್ಪ ಪೂಜಾರಿ, ದಿನೇಶ್, ಚೌಹಾನ್, ಶೇಖ್‌ಜುನೈದ್, ಶ್ರವಣಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net