ಕಸಾಯಿಖಾನೆಗೆ ಸಾಗಿಸುತ್ತಿದ್ದ 14 ಕರುಗಳ ರಕ್ಷಣೆ

 ಹುಣಸೆಪಾಳ್ಯದ ಬಳಿ ಗೂಡ್ಸ್ ವಾಹನದ ಮೂಲಕ ಸಾಗಿಸುತ್ತಿದ್ದ ಕರುಗಳನ್ನು ಪೊಲೀಸರು ವಶ ಕ್ಕೆ ಪಡೆದರು.
ಹುಣಸೆಪಾಳ್ಯದ ಬಳಿ ಗೂಡ್ಸ್ ವಾಹನದ ಮೂಲಕ ಸಾಗಿಸುತ್ತಿದ್ದ ಕರುಗಳನ್ನು ಪೊಲೀಸರು ವಶ ಕ್ಕೆ ಪಡೆದರು.
Published on
ಹನೂರು: ತಾಲೂಕಿನ ಹುಣಸೆಪಾಳ್ಯ ಗ್ರಾಮದ ಬಳಿ ಶನಿವಾರ ಕಸಾಯಿಖಾನೆಗೆ ಸಾಗಿಸುತ್ತಿದ್ದ 14 ಕರುಗಳನ್ನು ಹನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಜೆ 6.30ರಲ್ಲಿ ಗೂಡ್ಸ್ ವಾಹನದ ಮೂಲಕ ಕರುಗಳನ್ನು ತಮಿಳುನಾಡು ಕಡೆಗೆ ಸಾಗಿಸುತ್ತಿದ್ದರು. ಈ ಬಗ್ಗೆ ತಿಳಿದ ಸ್ಥಳೀಯರು ವಾಹನವನ್ನು ಪರಿಶೀಲಿಸಿದಾಗ ಕರುಗಳು ಇರುವುದು ಕಂಡುಬಂದಿದೆ. ಈ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ಅಸ್ಪಷ್ಟ ಉತ್ತರ ಬಂದಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇನ್‌ಸ್ಪೆಕ್ಟರ್ ಆನಂದ್‌ಮೂರ್ತಿ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಾಳಿ ನಡೆಸಿ ಕರುಗಳನ್ನು ವಶಕ್ಕೆ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net