ಜೂಜಾಡುತ್ತಿದ್ದ 11 ಜನರ ಬಂಧನ

 ಜೂಜಾಡುತ್ತಿದ್ದ ಬಂಧನ
ಜೂಜಾಡುತ್ತಿದ್ದ ಬಂಧನ
Published on
ಕೊಳ್ಳೇಗಾಲ: ಪಟ್ಟಣ ವ್ಯಾಪ್ತಿಯ ಕುಣಗಳ್ಳಿ ರಸ್ತೆಯಲ್ಲಿರುವ ಶ್ರೀ ಭ್ರಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಿಂಭಾಗ ಹೊನ್ನಹೊಳೆಗೆ ಹೋಗುವ ರಸ್ತೆಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದು 11 ಜನರ ವಿರುದ್ಧ ದೂರು ದಾಖಲಾಗಿದ್ದು. ಪಣಕ್ಕಿಟ್ಟಿದ್ದ 5.8 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಕೊಳ್ಳೇಗಾಲ ಟೌನ್‌ನ ಕಿರಣ, ನಿಶಾಂತ್ ಪ್ರಭು, ಸಿದ್ದಯ್ಯನಪುರ ಗ್ರಾಮದ ರಾಜೇಂದ್ರ ಪ್ರಸಾದ್, ಮೈಸೂರಿನ ಎಚ್.ಎನ್.ಮಂಜ, ಮಂಜ, ನರಸೀಪುರದ ಉಮೇಶ್, ಕುಣಗಳ್ಳಿ ಗ್ರಾಮದ ಮಹದೇವ ಬಂಧಿತರು.
ಇವರು ಅಕ್ರಮವಾಗಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಹಾಗೂ ಡಿವೈಎಸ್ಪಿ ಅಪರಾಧ ಪತ್ತೆದಳ ಸಿಬ್ಬಂದಿ ದಾಳಿ ನಡೆಸಿ ಜೂಜಾಡುತ್ತಿದ್ದವರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ತಪ್ಪಿಸಿಕೊಂಡ ಟೌನ್ ನಿವಾಸಿ ಪ್ರಜ್ವಲ್, ರಮೇಶ್, ಮೈಸೂರಿನ ಜಯರಾಮ ಹಾಗು ಜೂಜಾಟದಲ್ಲಿ ಸಿಕ್ಕಿಬಿದ್ದವರಿಗೆ ಕೊಳ್ಳೇಗಾಲ ಭಾಗದಲ್ಲಿ ಜೂಜಾಟ ಆಡುವವರನ್ನು ಸಂಪರ್ಕಿಸಿದ ಕಲಿಯೂರು ಷಣ್ಮುಖ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಸ್ಥಳದಲ್ಲಿದ್ದ ಮೊಬೈಲ್ಸ್, ಮೂರು ಬೈಕ್, 1 ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ಗಳಾದ ಲಿಂಗರಾಜು, ರವಿ, ಸಿಬ್ಬಂದಿ ರಾಜು, ಅನಿಲ್‌ಕುಮಾರ್, ಪ್ರಶಾಂತ್, ಡಿವೈಎಸ್ಪಿ ಅಪರಾಧ ಪತ್ತೆದ ದಳದ ಎಎಸ್‌ಐ ತಖೀವುಲ್ಲಾ, ವೆಂಕಟೇಶ್, ಬಿಳಿಗೌಡ, ಶಿವಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net