ಈ 2 ವಿಭಾಗದಿಂದ ಪರೀಕ್ಷೆ ಬರೆದಿದ್ದ 50ರ ಪೈಕಿ 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 9 ಅತ್ಯುನ್ನತ ಶ್ರೇಣಿ, 38 ಪ್ರಥಮ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಪಾಸಾಗುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪಿ. ಹರ್ಷಿತಾ (579), ಎನ್. ಪವಿತ್ರಾ (572), ಎಸ್. ವರ್ಷ (557), ದಿವ್ಯಾ (556), ಎನ್. ಮಾನಸ (598) ಹಾಗೂ ಪವನ ಬಾಯಿ (533) ಅಂಕವನ್ನು ಪಡೆದಿದ್ದರೆ, ವಿಜ್ಞಾನ ವಿಭಾಗದಲ್ಲಿ ಎಚ್. ಗಗನಾ ಸಾರಥಿ (547), ಎಸ್. ಜೀವನ್ (531) ಹಾಗೂ ಎನ್. ನರೇಶ್ (514) ಅಂಕವನ್ನು ಪಡೆಯುವುದರ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.