

ರಾಮನಗರ : ಕೆಂದ್ರ ಸಚಿವ ಕುವಾರಸ್ವಾಮಿ ಅವರಿಗೆ ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸಲಹೆ ನೀಡಿದರು.
ರಾಮನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಇದರಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅವಕಾಶವಿದ್ದು, ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಅವಕಾಶ ನೀಡಬೇಕು. ಈ ಹಿಂದೆ ತಮಿಳುನಾಡಿನಲ್ಲಿ ಜಯಲಲಿತಾ ಅವರು 17-18 ಉಪ ಚುನಾವಣೆಗಳನ್ನು ಅಭಿವೃದ್ಧಿ ಕಾರಣದಿಂದಲೇ ಬಿಟ್ಟುಕೊಟ್ಟಿದ್ದರು. ಇದೇ ರೀತಿ ಕುವಾರಸ್ವಾಮಿ ಅವರೂ ಕಾಂಗ್ರೆಸ್‌ಗೆ ಬಿಟ್ಟುಕೊಡಲಿ ಎಂದರು.
ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾರೆ. ಚನ್ನಪಟ್ಟಣದಿಂದ ಅಲ್ಲ. ಚನ್ನಪಟ್ಟಣದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಎರಡು ಬಾರಿ ಅಲ್ಲಿನ ಮತದಾರರು ಗೆಲ್ಲಿಸಿದ್ದಾರೆ. ಆದರೆ ಕ್ಷೇತ್ರಕ್ಕೆ ಕುಮಾರಸ್ವಾಮಿ ಏನು ವಾಡಿದರು?. ಅಭಿವೃದ್ಧಿ ಮಾಡದೇ ಮಂಡ್ಯಕ್ಕೆ ಹೋದರು. ಈಗ ಚನ್ನಪಟ್ಟಣ ಅಭಿವೃದ್ಧಿಗಾಗಿ ಯೋಗೇಶ್ವರ್‌ಗೆ ಏಕೆ ಮತಹಾಕಬಾರದೆಂದು ಮತದಾರರು ಯೋಚಿಸುತ್ತಿದ್ದಾರೆ. ಯೋಗೇಶ್ವರ್ ಕೈಗೆ ಸಿಗುವ ವ್ಯಕ್ತಿ. ಕುವಾರಸ್ವಾಮಿ ಎರಡು ಬಾರಿ ಗೆದ್ದರೂ ಕ್ಷೇತ್ರ ಅಭಿವೃದ್ಧಿ ವಾಡಲಿಲ್ಲ, ಜನರಿಗೂ ಸ್ಪಂದಿಸಲಿಲ್ಲ ಎಂದು ಹರಿಹಾಯ್ದರು.
ದೇವೇಗೌಡರು ದೊಡ್ಡವರು!
ದೇವೇಗೌಡರು ದೊಡ್ಡವರು! ಅವರು, ಯಾರಿಗೆ ಬೇಕಾದರೂ, ಏನು ಬೇಕಾದರೂ ವಾತನಾಡಬಹುದು. ಸಿದ್ದರಾಮಯ್ಯ ಹಾಗೂ ಅವರು ಒಟ್ಟಿಗೆ ರಾಜಕಾರಣ ವಾಡಿದವರು. ಯಾರೂ ಎಷ್ಟು ವಾತನಾಡಬೇಕೋ ಅಷ್ಟು ವಾತನಾಡಬೇಕು. ಅಂಕೆ ಮೀರಿದರೆ ಡ್ಯಾಮೇಜ್ ಆಗುತ್ತದೆ. ನನಗೆ ದೇವೇಗೌಡರ ಬಗ್ಗೆ ಗೌರವ ಇದೆ. ರಾಜಕೀಯವೇ ಬೇರೆ, ಗೌರವವೇ ಬೇರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರು ನಗರ ಡಿಸಿಸಿ ಅಧ್ಯಕ್ಷ ಹನುಮಂತರಾಯಪ್ಪ, ಎಂಎಲ್‌ಸಿ ಪುಟ್ಟಣ್ಣ ಇದ್ದರು.