

ಶಿರಸಿ: ಲಾಕ್ಡೌನ್ ಘೊಷಣೆ ಬೆನ್ನಿಗೇ ಅಡಕೆ ದರ ಹಿಮ್ಮುಖವಾಗಿ ಬೆಳಗಾರರು ಕಂಗಾಲಾಗಿದ್ದರು. ಆದರೀಗ ಲಾಕ್ಡೌನ್ ತೆರವಿನ ಜತೆ ಅಡಕೆಗೆ ದಾಖಲೆಯ ದರ ಲಭಿಸುತ್ತಿದೆ. ವರ್ಷದ ಆರಂಭದಿಂದ ಲಾಕ್ಡೌನ್ ಘೊಷಣೆವರೆಗೂ 35 ಸಾವಿರ ರೂ. ಆಸುಪಾಸಿನಲ್ಲಿದ್ದ ಚಾಲಿ ಅಡಕೆ ಬುಧವಾರದ ಮಾರುಕಟ್ಟೆಯಲ್ಲಿ 40098 ರೂ. ಪ್ರತಿ ಕ್ವಿಂ.ಗೆ ಮಾರಾಟವಾಗಿದೆ. ಇದು 7 ವರ್ಷಗಳ ಬಳಿಕ ಚಾಲಿ ಅಡಕೆಗೆ ಸಿಕ್ಕ ಉತ್ತಮ ದರವಾಗಿದೆ.
ವರವಾದ ಲಾಕ್ಡೌನ್:
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರು ಬೆಳೆಸಾಲ ಹಾಗೂ ಇತರ ಸಾಲಗಳ ಮರುಪಾವತಿ ಮಾಡುವುದು ನಿಯಮ. ಬೆಳೆ ಮಾರಾಟ ಮಾಡಿದ ಹಣದಲ್ಲಿ ಸಾಲ ತೀರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಇದೇ ವೇಳೆಯಲ್ಲಿ ಸರ್ಕಾರ ಲಾಕ್ಡೌನ್ ಘೊಷಿಸಿದ್ದರಿಂದ ಹೆಚ್ಚಿನ ಬೆಳೆಗಾರರು ಅಡಕೆ ಮಾರಾಟ ಮಾಡಲಾಗದೆ ದಾಸ್ತಾನಿಟ್ಟಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದ ಕಾರಣ ಲಾಕ್ಡೌನ್ ಬಳಿಕ ಏಕಾಏಕಿ ದರ ಏರುಮುಖವಾಗಿದೆ. ಇದು ಅಡಕೆ ಮಾರಲಾಗದೇ ಇದ್ದ ಬೆಳೆಗಾರರಿಗೆ ಲಾಭವಾಗುವಂತಾಗಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಹೆಚ್ಚಿದ ಆವಕ: ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ಬೆಳೆಗಾರರು ಏಕಾಏಕಿ ಮಾರುಕಟ್ಟೆಗೆ ಮಹಸೂಲನ್ನು ತಂದು ಮಾರುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು, ಹೊರಗಿನ ವ್ಯಾಪಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಡಕೆ ವಹಿವಾಟಲ್ಲಿ ಹೆಸರಾದ ಟಿಎಸ್ಎಸ್ ಸಂಸ್ಥೆಯೊಂದರಲ್ಲೇ ನಿತ್ಯ 1 ಸಾವಿರ ಕ್ವಿಂ.ಗೂ ಹೆಚ್ಚಿನ ಅಡಕೆ ಮಾರಾಟವಾಗುತ್ತಿದೆ. ಉತ್ತಮ ಧಾರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ದಿನದಿಂದ ದಿನಕ್ಕೆ ಹೆಚ್ಚಿನ ಮಹಸೂಲು ಆಗಮಿಸುತ್ತಿದೆ.
ಅಡಕೆಗೆ ಸಂಬಂಧಿಸಿ ಅದರ ನಿರ್ವಹಣೆ, ಕೂಲಿ ದರದಲ್ಲಿಯೂ ಹೆಚ್ಚಳವಾಗಿದ್ದು, ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬೆಳೆಗಾರರ ಜೀವನ ಕಷ್ಟದಲ್ಲಿದೆ. ಚಾಲಿ ಅಡಕೆಯ ಪ್ರತಿ ಕ್ವಿಂಟಾಲ್ಗೆ 40 ಸಾವಿರ ರೂ. ಬಂದಿರುವುದು ಯೋಗ್ಯ ದರವೇ ಆಗಿದೆ. ಈ ದರ ಸ್ಥಿರವಾಗಿದ್ದರೆ ಇನ್ನಷ್ಟು ಅನುಕೂಲ ಆಗುತ್ತದೆ.| ಗಣೇಶ ಹೆಗಡೆ- ಅಡಕೆ ಬೆಳೆಗಾರವರ್ಷದ ಆರಂಭದಿಂದಲೂ ಮಾರುಕಟ್ಟೆಯಲ್ಲಿಯೂ ಅಡಕೆ ದಾಸ್ತಾನಿಲ್ಲ. ಅಲ್ಲದೇ, ದೇಶದಲ್ಲಿ ಆಮದು ಅಡಕೆ ಬರುತ್ತಿಲ್ಲ. ಸಧ್ಯ ಲಾಕ್ಡೌನ್ ತೆರವಾದ ಕಾರಣ ಅಡಕೆ ಉತ್ಪನ್ನ ಹೆಚ್ಚಿನದಾಗಿ ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೇ, ವ್ಯಾಪಾರಸ್ಥರಿಂದ ಬೇಡಿಕೆಯೂ ಹೆಚ್ಚಿದೆ. ಈ ಕಾರಣ ರೈತರಿಗೆ ಅತ್ಯುತ್ಮ ದರ ಲಭಿಸುತ್ತಿದೆ.| ರವೀಶ ಹೆಗಡೆ- ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ2014ರಿಂದ ಈವರೆಗೆ ಜೂನ್ ತಿಂಗಳಲ್ಲಿನ ಚಾಲಿ ದರವರ್ಷ ದರ ಸರಸರಿ ಪ್ರತಿ ಕ್ವಿಂಟಾಲ್ಗೆ2014 41000- 420002015 24000- 250002016 25000- 260002017 32000- 330002018 31000- 320002019 28000- 290002020 30000- 310002021 40098-