

ಹೆಬ್ರಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಹೆಬ್ರಿ ತಾಲೂಕುಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಹೆಬ್ರಿಯ ಶಂಕರ ಶೇರಿಗಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ಶಂಕರ ಶೇರಿಗಾರ್ ಗ್ರಾಪಂ ಸದಸ್ಯರಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ನೇಮಕಗೊಂಡಿದ್ದಾರೆ. ಸದಸ್ಯರಾಗಿ ಸತೀಶ್ ಹುತ್ತುರ್ಕೆ, ಸಾವಿತ್ರಿ ನಾಯ್ಕ, ಪ್ರವೀಣ್ ಸೂಡ, ಶಶಿಕಲಾ ಆರ್ ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಮನೋಹರ ಹೆಗ್ಡೆ, ರಮೇಶ ಶೆಟ್ಟಿ ಅಜ್ಜೋಳ್ಳಿ, ರಘುನಾಥ ಪೂಜಾರಿ, ರಾಜೇಶ ಆಚಾರ್ಯ, ನೀರೆ ಕೃಷ್ಣ ಶೆಟ್ಟಿ, ವಸಂತ ಪೂಜಾರಿ, ರಾಜು ಪೂಜಾರಿ, ಜಗದೀಶ ಹೇರಳೆ, ಇಮ್ರಾನ್ ಖಾನ್ ನೇಮಕಗೊಂಡಿದ್ದಾರೆ.