ಸರಗಳ್ಳನ ಬಂಧನ

Published on

24 ಗ್ರಾಂ ಚಿನ್ನದ ಸರ ವಶ | ಮತ್ತೊಬ್ಬನ ಸೆರೆ ಪೊಲೀಸರ ತಲಾಶ್​

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಿರುವ ನಗರಠಾಣೆ ಪೊಲೀಸರು, 2 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಚಿನ್ನದ ಚೈನ್​ಅನ್ನು ವಶಪಡಿಸಿಕೊಂಡಿದ್ದಾರೆ.

ಕೆಜಿಎ್​ನ ಪಾರಂಡಹಳ್ಳಿ ನಿವಾಸಿ ಸಿದ್ದಿಕ್​ ಅಲಿಯಾಸ್​ ಸಿದ್ದಿಕ್​ ಪಾಷಾ (33) ಬಂಧಿತ. ಮತ್ತೊಬ್ಬ ಆರೋಪಿ ಶಾಹುಲ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

2024ರ ಡಿಸೆಂಬರ್​ 27ರಂದು ನಗರದ ಮಾಳಪಲ್ಲಿಯ ನಿವಾಸಿ ಕನಕ ನೀಲಮ್ಮ (69)ಎಂಬುವರು ಕೋಲಾರ ತಾಲೂಕಿನ ನರಸಾಪುರ ಬಳಿ ಸಂಬಂಧಿಕರ ನಾಮಕರಣ ಕಾರ್ಯಕ್ರಮಕ್ಕೆ ತೆರಳು ಗಂಡ ಶ್ರೀರಾಮಯ್ಯ ಜತೆ ಕೆಎಸ್ಸಾರ್ಟಿಸಿ ಬಸ್​ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್​ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಕುತ್ತಿಗೆಯಲ್ಲಿದ್ದ ಸರ ಕಸಿದಿದ್ದರು.

ಈ ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್​ಪಿ ಕುಶಲ್​ ಚೌಕ್ಸೆ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಪಿ.ಮುರಳೀಧರ ಚಿಂತಾಮಣಿ ನಗರ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್​ ವೀಜಿಕುಮಾರ್​ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net