ಸರಗಳ್ಳನ ಬಂಧನ

Published on

*ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಪೊಲೀಸರು

ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಓಬನ್ನಗಾರಿಹಳ್ಳಿ ಹೊರವಲಯದಲ್ಲಿ ಕುರಿಗಳಿಗೆ ಹುಲ್ಲು ಕೊಯ್ಯುತ್ತಿದ್ದ ಮಹಿಳೆ 33 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದ ಕಳ್ಳನನ್ನು ಗುಂಡಿಬಂಡೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹಾರಾಷ್ಟ್ರದ ಸಾದಿಕ್ ರಫೀಕ್‌ಖಾನ್ ಬಂಧಿತ. ಬಂಧಿತನಿಂದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಒಂದು ವರ್ಷದ ಹಿಂದೆ ಓಬನ್ನಗಾರಿಹಳ್ಳಿಯ ಚೌಡಮ್ಮ ಅವರು ಗುಡಿಬಂಡೆ-ಬಾಗೇಪಲ್ಲಿ ರಸ್ತೆಯಲ್ಲಿ ಪಕ್ಕದ ತಮ್ಮ ಜಮೀನಿನ ಹುಲ್ಲು ಕೊಯ್ಯುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿ ಸರ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಆರಕ್ಷಕ ವೃತ್ತ ನಿರೀಕ್ಷ ನಯಾಜ್ ಬೇಗ್, ಉಪ ನಿರೀಕ್ಷಕರಾದ ಗಣೇಶ್, ರಮೇಶ್, ಪೇದೆಗಳಾದ ಆನಂದ್, ದಕ್ಷಿಣಮೂರ್ತಿ, ನಾರಾಯಣಸ್ವಾಮಿ, ರವೀಂದ್ರ ಕುಮಾರ್, ಮುನಿಕೃಷ್ಣ, ಆರುಣ್ ಮತ್ತಿತರರನ್ನು ವರಿಷ್ಠಾಧಿಕಾರಿ ಕುಶಾಲ್ ಚೌಕ್ಸ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net