ಸರಗಳ್ಳನ ಬಂಧಿಸಿದ ಕುದೂರು ಪೊಲೀಸರು

02-01-rama-kuduru
Published on

ಮಾಗಡಿ

ಡ್ರಾಪ್ ನೀಡುವ ನೆಪದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ದೊಡ್ಡಬಿದರಕಲ್ಲು ಬಡಾವಣೆಯ ಲಕ್ಷ್ಮೀ ಚಿನ್ನಾಭರಣ ಕಳೆದುಕೊಂಡವರು. ಗದಗ ಜಿಲ್ಲೆ ಲಕ್ಷ್ಮೀಶ್ವರ ಹೋಬಳಿ ಹುಲ್ಲೂರು ಗ್ರಾಮದ ಸೈಯದ್ ಅಲಿ (26) ಬಂಧಿತ.

ಡಿ.8 ರಂದು ಗೃಹಪ್ರವೇಶಕ್ಕೆಂದು ಅಂಚೆಪಾಳ್ಯಕ್ಕೆ ಬಂದಿದ್ದ ಬೆಂಗಳೂರಿನ ದೊಡ್ಡಬಿದರಕಲ್ಲು ಬಡಾವಣೆಯ ಲಕ್ಷ್ಮೀ ಅವರಿಗೆ ಬೈಕ್‌ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ, ಒಂದು ಎಳೆಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಿರುವ ಪೊಲೀಸರು 7.25 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಸರ ಮತ್ತು ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

ರಾಮನಗರ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ ಮಾರ್ಗದರ್ಶನದಲ್ಲಿ ಕುದೂರು ಠಾಣೆಯ ವೃತ್ತನಿರೀಕ್ಷಕರಾದ ಬಿ.ನವೀನ್, ಪಿ.ಎಸ್.ಐ ಸರ್ದಾರ್ ಸಾಬ್, ಸಿಬ್ಬಂದಿ ಸೂರ್ಯಕುಮಾರ್, ಗುರುಮೂರ್ತಿ, ನಾಗರಾಜು, ದರ್ಶನ್, ಶ್ರೀನಿವಾಸ್, ಶಿವರಾಜು, ಅಪ್ಪಾಸಾಬ್, ಲೋಹಿತ್ ನ್ಯಾಮನ್ .ಚೇತನಾ, ದೀಪಕ್ ಕುಮಾರ್, ಲಕ್ಷ್ಮೀ ಇಳಗೇರ್ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net