ಗರ್ಭ ಕೊರಳು, ಸ್ತನ ಕ್ಯಾನ್ಸರ್ ವಾಹಿತಿ

camp
Published on

ಕಿನ್ನಿಗೋಳಿ: ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ, ರೋಟರಿ ಕ್ಲಬ್ ಕಿನ್ನಿಗೋಳಿ ಘಟಕ ಹಾಗೂ ಪಕ್ಷಿಕೆರೆ ಶ್ರೀ ವಿನಾಯಕ ಮಹಿಳಾ ಮಂಡಳಿ ನೇತೃತ್ವದಲ್ಲಿ ಗರ್ಭ ಕೊರಳಿನ ಮತ್ತು ಸ್ತನ ಕ್ಯಾನ್ಸರ್ ವಾಹಿತಿ ಕಾರ್ಯಾಗಾರ ಪಕ್ಷಿಕೆರೆಯಲ್ಲಿ ಇತ್ತೀಚೆಗೆ ನಡೆಯಿತು.

ಶ್ರೀ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಅತ್ತೂರು ಕೆವ್ರಾಲ್ ಒಕ್ಕೂಟ, ಕೆವ್ರಾಲ್ ಕೋರ್ದಬ್ಬು ಸಂಜೀವಿನಿ ಒಕ್ಕೂಟ, ಪಕ್ಷಕೆರೆ ವೈದ್ಯನಾಥ ಮಹಿಳಾ ಮಂಡಳಿ, ಹೊಸಕಾಡು ಶ್ರೀ ನಾಗಬ್ರಹ್ಮ ಮಹಿಳಾ ಮಂಡಳಿ, ನವಜ್ಯೋತಿ ಮಹಿಳಾ ಮಂಡಳಿ ಪಂಜ ಕೊಯಿಕುಡೆ, ಹರಿಪಾದ ಜಾರಂತಾಯ ಮಹಿಳಾ ಮಂಡಳಿ ಪಂಜ ಕೊಯಿಕುಡೆ, ಸುರಗಿರಿ ಮಹಿಳಾ ಮತ್ತು ಯುವತಿ ಮಂಡಳಿ, ಅತ್ತೂರು ಕಾಪಿಕಾಡು ಶ್ರೀ ಕೃಷ್ಣ ಮಹಿಳಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುಕ್ಕ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಲಿನ್ಸೆಲ್ ಡಿಸೋಜ ಮತ್ತು ಡಾ.ಹರೀಶ್ ನಾಯಕ್ ಮೂಡುಬಿದಿರೆ ಮಾಹಿತಿ ನೀಡಿದರು.

ಮಂಡಳಿಯ ಅಧ್ಯಕ್ಷ ರಾಜೇಶ್, ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ, ಜಂಟಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಿನ್ನಿಗೋಳಿ ಘಟಕದ ಅಧ್ಯಕ್ಷ ಧನಂಜಯ ಪಿ.ಶೆಟ್ಟಿಗಾರ್ ಸ್ವಾಗತಿಸಿದರು. ಮಹಿಳಾ ಮಂಡಳಿ ಕೋಶಾಧಿಕಾರಿ ವಿನಯಲತಾ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪಾರ್ವತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net