ಕೂಡಿ ಬಾಳುವ ಜೀವನ ಶಿಕ್ಷಣ : ಪುಂಡರೀಕಾಕ್ಷ ಅಭಿಪ್ರಾಯ

Published on

ಉಳ್ಳಾಲ: ಸಂವಿಧಾನದ ಆಶಯದಂತೆ ಬಹುತ್ವವನ್ನು ಸಂಭ್ರಮಿಸುತ್ತಾ ಸರ್ವ ಜನಾಂಗದವರು ಕೂಡಿ ಬಾಳುವ ಜೀವನ ಶಿಕ್ಷಣ ನೀಡುವ ಕಾರ್ಯ ಎಲ್ಲ ಕಡೆ ನಡೆಯಬೇಕು ಎಂದು ವಾಣಿಜ್ಯ ತೆರಿಗೆ ಸಲಹೆಗಾರ ಪುಂಡರೀಕಾಕ್ಷ ಹೇಳಿದರು.

ಮುಡಿಪು ಜನಶಿಕ್ಷಣ ಟ್ರಸ್ಟ್ ಸ್ಮೈಲ್ ಸ್ಕಿಲ್ ಸ್ಕೂಲ್‌ನಲ್ಲಿ ಶನಿವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಏಕತ್ವದಿಂದ ಬಹುತ್ವಕ್ಕೆ ಕೊಂಡೊಯ್ಯುವ ಶಿಕ್ಷಣ ಇಂದಿನ ಅಗತ್ಯ. ಜೀವನ ಕೌಶಲದೊಂದಿಗೆ ವೃತ್ತಿ ಕೌಶಲ ಪಡೆಯುತ್ತಿರುವ ವಿದ್ಯಾರ್ಥಿನಿಯರು ಸ್ವ ಉದ್ಯೋಗದೊಂದಿಗೆ ಸೌಹಾರ್ದ ಸಮಾಜ ನಿರ್ಮಾಣದಲ್ಲೂ ಪಾಲುದಾರರಾಗಬೇಕು ಎಂದರು.

ನರೇಗಾದ ಮಾಜಿ ಒಂಬುಡ್ಸ್‌ಮೆನ್ ಎನ್.ಶೀನ ಶೆಟ್ಟಿ ಮಾತನಾಡಿ, ಶ್ರಮದಾನ, ಸಂವಾದ ಕಾರ್ಯಕ್ರಮಗಳು ಮನಸ್ಸು ಮತ್ತು ಶರೀರಕ್ಕೆ ಸಂಸ್ಕಾರ ನೀಡುತ್ತವೆ ಎಂದು ಹೇಳಿದರು.

ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರಾದ ಕೌಸರ್ ಭಾನು, ಕುಶೀ, ಫಾತಿಮ ನಸೀದಾ ಶಿಕ್ಷಕಿಯರಾದ ಜನನಿ, ಪ್ರಜ್ಞಾ, ಕಾವೇರಿ ಅನುಭವ par ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net