ಸಿರಿಧಾನ್ಯದಲ್ಲಿ ಔಷಧಿ ಗುಣ

Untitled design888
ಹನುಮಸಾಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಿರಿಧಾನ್ಯದ ಮಹತ್ವ ಹಾಗೂ ಬಳಕೆ ತರಬೇತಿ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಉದ್ಘಾಟಿಸಿದರು. ಸಂಜೀವಿನಿ ತಾಲೂಕು ಯೋಜನಾಧಿಕಾರಿ ಮಾದೇಗೌಡ ಪೊಲೀಸ್ ಪಾಟೀಲ್, ಗ್ರಾಪಂ ಸದಸ್ಯರಾದ ಬಸವರಾಜ ದ್ಯಾವಣ್ಣನವರ, ಮರೇಗೌಡ ಬೋದುರ, ರಮೇಶ ಬಡಿಗೇರ, ಮುಖಂಡರಾದ ರೇಣುಕಾ ಪುರದ, ಶಕುಂತಲಾ ಹಲಕೂಲಿ, ಹನುಮೇಶ ಮೆಣಸಗಿ, ಅನ್ನಪೂರ್ಣ ಮೆಣಸಗಿ ಇತರರಿದ್ದರು.
Published on

ಹನುಮಸಾಗರ: ದೇಹಕ್ಕೆ ಪೌಷ್ಟಿಕಾಂಶ ಒದಗಿಸುವ ಸಿರಿಧಾನ್ಯಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯ ವೃದ್ಧಿ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.

ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶ

ಪಟ್ಟಣದ ಶಾರದಾ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಸಿರಿಧಾನ್ಯ ದಿನ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯದ ಮಹತ್ವ ಮತ್ತು ಬಳಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಆಹಾರ ಸೇವನೆಯಿಂದ ಅನೇಕ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಧುನಿಕ ಜಂಕ್‌ಫುಡ್ ಸೇವನೆಯನ್ನು ಬಿಡಬೇಕು. ಸಿರಿಧಾನ್ಯ ಆಹಾರ ಪದಾರ್ಥಗಳನ್ನು ಊಟಕ್ಕೆ ಬಳಕೆ ಮಾಡಬೇಕು. ಸಿರಿಧಾನ್ಯದಲ್ಲಿ ಔಷಧಿ ಗುಣವಿದ್ದು, ಮಧುಮೇಹ, ರಕ್ತದೊತ್ತಡ ಸೇರಿ ಅನೇಕ ಸಮಸ್ಯೆಗಳನ್ನು ತಡೆಗಟ್ಟಲಿದೆ. ಈ ಕುರಿತು ತಜ್ಞರು ತಿಳಿಸಿದ್ದಾರೆ. ಪೂರ್ವಜರು ಆರೋಗ್ಯವಂತರಾಗಿರಲು ಸಿರಿಧಾನ್ಯದ ಆಹಾರವೇ ಕಾರಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net