More

    ಗ್ರಾಪಂ ವ್ಯಾಪ್ತಿಯ ಕೇಬಲ್/ಟವರ್ ನೋಂದಣಿಗೆ ಕ್ರಮ

    ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲ ಕೇಬಲ್, ಕೇಬಲ್ ಡಕ್ಟ್ ಮತ್ತು ದೂರ ಸಂಪರ್ಕ ಟವರ್‌ಗಳನ್ನು ನೋಂದಾಯಿಸಿಕೊಂಡು ಏಜೆನ್ಸಿಗಳಿಂದ ಫೀಜು/ತೆರಿಗೆ ಪಾವತಿಗೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ರಾಜ್ ಆಯುಕ್ತಾಲಯ ಎಲ್ಲ ಜಿಪಂ ಸಿಇಒಗೆ ಸೂಚಿಸಿದೆ.

    ರಾಜ್ಯದ ಪ್ರತಿ ಗ್ರಾಪಂ ಪ್ರದೇಶದ ಪರಿಮಿತಿಯಲ್ಲಿ ಈಗಾಗಲೇ ಸ್ಥಾಪಿಸಿರುವ ದೂರ ಸಂಪರ್ಕ ಟವರ್/ಅಳವಡಿಸಿರುವ ಕೇಬಲ್‌ಗಳ ಸಮೀಕ್ಷೆಗಳನ್ನು ಡಿ.29ರ ಒಳಗೆ ಪೂರ್ಣಗೊಳಿಸಿ ಏಜೆನ್ಸಿಗಳಿಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಹಾಗೂ ನಿಯಮಗಳನ್ವಯ ಫೀಜು/ತೆರಿಗೆ ಪಾವತಿಸುವಂತೆ ನಿರ್ದೇಶನ/ನೋಟಿಸ್‌ಗಳನ್ನು ನೀಡುವ ಮೂಲಕ ಪ್ರಗತಿ ಸಾಧಿಸಲು ಸಿಇಒಗಳಿಗೆ ಸೂಚಿಸಲಾಗಿದೆ. ಈ ಉದ್ದೇಶದಿಂದ ಯಾವುದೇ ಏಜೆನ್ಸಿ ನೋಂದಣಿಯಿಂದ ಹೊರಗುಳಿಯದಂತೆ ತಾಲೂಕು ಪಂಚಾಯಿತಿ ಇಒಗಳು ದೃಢೀಕರಿಸಿಕೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts