ಸಿರಿಧಾನ್ಯ ಬಳಸಿ ಆರೋಗ್ಯ ಪಡೆಯಿರಿ

siridhanya
Published on

ಕೊಂಡ್ಲಹಳ್ಳಿ: ಸಿರಿಧಾನ್ಯ ಬಳಕೆಯಿಂದ ಆರೋಗ್ಯ ನಮ್ಮದಾಗಲಿದೆ ಎಂದು ಬಿಳಿನೀರು ಚಿಲುಮೆ ಎಫ್‌ಪಿಒ ಅಧ್ಯಕ್ಷ ಕೆ.ಟಿ.ಶ್ರೀರಾಮರೆಡ್ಡಿ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ರೈತರಿಗೆ ಸಿರಿಧಾನ್ಯಗಳ ಉತ್ಪಾದನೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಯೋಜನಾಧಿಕಾರಿ ಶಶಿಧರ್, ಸಿಇಒ ವಿಜಯ್ ಕುಮಾರ್ ಮಾತನಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಟಿ.ತಿಪ್ಪೇಸ್ವಾಮಿ, ನಿರ್ದೇಶಕರಾದ ಎನ್.ಚಂದ್ರಣ್ಣ, ಯು.ಟಿ.ತಿಪ್ಪೇಸ್ವಾಮಿ, ಪ್ರಗತಿಪರ ರೈತ ಗಂಗಾಧರಪ್ಪ, ಮಹೇಶ್, ಉತ್ತರಕುಮಾರ, ವಲಯ ಮೇಲ್ವಿಚಾರಕ ಮಂಜುನಾಥ್, ಸೇವಾ ಪ್ರತಿನಿಧಿಗಳಾದ ಪಾರ್ವತಮ್ಮ, ಭಾಗ್ಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net