ದೀರ್ಘಕಾಲಿನ ಬದುಕಿಗೆ ಸಿರಿಧಾನ್ಯ

FotoJet (1)
Published on

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಭಿಮತ | ಗಮನಸೆಳೆದ ತರಹೇವಾರಿ ಖಾದ್ಯಗಳು

 ಚಿಕ್ಕಬಳ್ಳಾಪುರ : ಸಿರಿಧಾನ್ಯ ಬಳಕೆಯಿಂದ ಧೀರ್ಕಾಲೀನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ನಗರದ ಜಂಟಿ ಕಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕಷಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಪಾಕ ಸ್ಪರ್ಧೆಗೆ ಚಾಲನೆ ನೀಡಿ ವಾತನಾಡಿದರು.

ಸಿರಿಧಾನ್ಯಗಳಲ್ಲಿ ಅಗ್ರಸ್ಥಾನದ ಬಳಕೆಯಲ್ಲಿರುವ ರಾಗಿಯ ಬಳಕೆ ಮಧುಮೇಹ ಗುಣಪಡಿಸುವಲ್ಲಿ ಸಹಕಾರಿ. ಇದಕ್ಕೆ ಬಹುತೇಕರು ಸಿರಿಧಾನ್ಯಗಳ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಮೊದಲು ರಾಗಿ ತಿಂದವನು ನಿರೋಗಿ ಎಂಬ ವಾತು ಜನಜನಿತವಾಗಿದೆ ಎಂದರು.

ಚಿಕ್ಕಬಳ್ಳಾಪುರ ಭಾಗದಲ್ಲಿಯೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ರೈತರು ಮುಂದಾಗಬೇಕು. ಇವುಗಳಿಂದ ತಯಾರಿಸುವ ಪಾಯಸ, ಲಡ್ಡು, ರಾಗಿ ಮುದ್ದೆ, ಚಕ್ಕುಲಿ, ಶಾವಿಗೆ ಸೇರಿ ಇತರ ಖಾದ್ಯಗಳನ್ನು ಎಲ್ಲರೂ ಬಳಸುವ ಮೂಲಕ ಸ್ವಾಸ್ಥ್ಯ ಆರೋಗ್ಯಕರ ಸವಾಜ ಸೃಷ್ಟಿಸಬೇಕು ಎಂದರು.

ಬದಲಾದ ಆಹಾರಶೈಲಿ ಬಹುತೇಕ ಮಾರಕ

ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್ ವಾತನಾಡಿ, ಪೂರ್ವಜರು ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿದ್ದರಿಂದ ದಢಕಾಯರಾಗಿರುತ್ತಿದ್ದರು. ಸುಧೀರ್ಘ ಕಾಲ ಉತ್ತಮ ಆರೋಗ್ಯ ಹೊಂದಿರುತ್ತಿದ್ದರು. ಆದರೆ, ಕಾಲಾನಂತರದಲ್ಲಿ ಬದಲಾದ ಆಹಾರಶೈಲಿ ಬಹುತೇಕ ಮಾರಕವಾಗಿದೆ ಎಂದರು. ಒತ್ತಡದ ಆಧುನಿಕ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳಿಗೆ ಮನುಷ್ಯರು ತುತ್ತಾಗುತ್ತಿರುವ ಕಾಲಟ್ಟದಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಕಷಿ ಇಲಾಖೆಯ ಮೂಲಕ ಅರಿವು ಮೂಡಿಸಿ, ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಬಳಕೆ ಕಡಿಮೆ

ಜಂಟಿ ಕಷಿ ನಿರ್ದೇಶಕಿ ಜಾವೀದಾ ನಸೀವಾ ಖಾನಂ ವಾತನಾಡಿ, ಸಿರಿಧಾನ್ಯಗಳ ಕಷಿಯು ಪ್ರಾಚೀನ ಪದ್ಧತಿ. ಆದರೆ, ಈಗ ಬಹುತೇಕ ಸಿರಿಧಾನ್ಯಗಳ ಬಳಕೆ ಕಡಿಮೆಯಾಗಿದ್ದು, ಅಳಿವಿನಂಚಿನತ್ತ ಸಾಗುತ್ತಿರುವುದು ದುರದೃಷ್ಟಕರ. ಸಿರಿಧಾನ್ಯಗಳಲ್ಲಿ ವಿಟಮಿನ್, ಪ್ರೋಟಿನ್ ಹಾಗೂ ಇತರ ಪೋಷಕಾಂಶಗಳಿವೆ. ಈ ಬೆಳೆಗಳು ಪರಿಸರ ಸ್ನೇಹಿಯಾಗಿದ್ದು ಕಡಿಮೆ ಮಳೆ ಬರುವ ಹಾಗೂ ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಬೆಳೆಯಬಹುದಾಗಿದೆ. ಸರ್ಕಾರವು 2023ನೇ ಸಾಲಿನಲ್ಲಿ ವಿಶೇಷವಾಗಿ ಸಿರಿಧಾನ್ಯಗಳ ವರ್ಷಾಚರಣೆ ೋಷಿಸಿದ್ದು ಇದರ ಮಹತ್ವವನ್ನು ಎಲ್ಲರೂ ಅರಿತು, ಪ್ರತಿಯೊಬ್ಬರು ಸಿರಿಧಾನ್ಯಗಳ ಖಾದ್ಯಗಳನ್ನು ಸೇವಿಸಬೇಕು ಎಂದರು.

ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಕಷಿ ಉಪನಿರ್ದೇಶಕರಾದ ದೀಪಶ್ರೀ, ಎಂ.ಎನ್ ಮಂಜುಳಾ, ಚಿಂತಾಮಣಿ ಕಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಸೌಮ್ಯಾ, ಚುನಾವಣಾ ಶಾಖೆ ತಹಸಿಲ್ದಾರ್ ಶ್ವೇತಾ ಮತ್ತಿತರರು ಇದ್ದರು.

ಬಾಯೂರಿಸುವ ತಿಂಡಿ ತಿನಿಸುಗಳು

ಪಾಕ ಸ್ಪರ್ಧೆಯಲ್ಲಿ ತಯಾರಿಸಲಾದ ಸಿರಿಧಾನ್ಯಗಳ ತಿಂಡಿ ತಿನಿಸುಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ರೈತರು ಹಾಗೂ ಸಾರ್ವಜನಿಕರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪರ್ಧೆಯಲ್ಲಿ 60 ಜನರು ಭಾಗವಹಿಸಿದ್ದರು. ರಾಗಿ ಮತ್ತು ನವಣೆ ಪೇಡಾ, ಬಿಸ್ಕತ್, ನವಣೆ ಉಪ್ಪಿಟ್ಟು, ಸಜ್ಜೆ ಕಡುಬು, ಸಾಮೆ ಕಿಚಡಿ, ಉದಲೂ ಪಾಯಸ, ಸಜ್ಜೆ ಲಾಡು, ನವಣೆ ಪಲಾವ್, ಚಿನ್ನಕುರುಳಿ, ವಾಲ್ವಿ, ಒತ್ತು ಶಾವಿಗೆ, ರಾಗಿ ಹಲ್ವ, ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ಒತ್ತು ಶಾವಿಗೆ ಕಾಯಿರಸ, ಸಜ್ಜೆರೊಟ್ಟಿ, ಕುಂಬಳಕಾಯಿ ಕಡುಬು, ರಾಗಿ ಕಿಲ್ಸ್, ಸಿಹಿ ಪೊಂಗಲ್, ಸಿರಿಧಾನ್ಯ ಹಲ್ವ, ರಾಗಿ ದೋಸೆ, ನವಣೆ ತಂಬಿಟ್ಟು, ರಾಗಿ ಬೆಲ್ಲದ ಬರ್ಫಿ, ಸಾಮೆ ಬಿಸಿ ಬೇಳೆಬಾತ್, ನವಣೆ ಚಕ್ಕುಲಿ, ಸಾಮೆ ಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್, ಬರಗು, ಅರ್ಕ, ಸಾವಯವ ಬೆಲ್ಲದಿಂದ ತಯಾರಿಸಿದ ಕೇಕ್ ಮತ್ತಿತರ ಖಾದ್ಯಗಳು ಗಮನ ಸೆಳೆದವು.

ಕರಪತ್ರಗಳ ಬಿಡುಗಡೆ

ಪ್ರಧಾನ ಮಂತ್ರಿ ಬಿವಾ ಯೋಜನೆಯ ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಅನಿರೀಕ್ಷಿತ ಟನೆಗಳಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರ, ಸಮೀಕ್ಷೆ, ಪ್ರಸ್ತುತ ಲಭ್ಯವಿರುವ ಕಷಿ ಮತ್ತು ತೋಟಗಾರಿಕಾ ಬೆಳೆಗಳ ವಿಮೆ ಸೇರಿದಂತೆ ವಿವಿಧ ಯೋಜನೆ ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net