ದುಷ್ಕರ್ಮಿಗಳ ಹೆಡೆಮುರಿಕಟ್ಟಿ

Somanna11
Published on

ತುಮಕೂರು:ಮಂಗಳೂರಿನಲ್ಲಿ ಮತ್ತೇ ಹಿಂದು ಮುಖಂಡರ ಕೊಲೆಗೆ ಬೆದರಿಕೆ ಹಾಕಿದ್ದು ರಾಜ್ಯ ಸರ್ಕಾರ ಮಾತಾಡೋದನ್ನು ಕಡಿಮೆ ಮಾಡಿ. ಬೇರೆಯವರ ಮನೆಗೆ ಬೆಂಕಿ ಬಿದ್ದಿರೋದನ್ನು ಕಂಡು ಖುಷಿ ಪಡುವಯದನ್ನು ಬಿಡಿ. ಆ ಬೆಂಕಿ ನಿಮ್ಮ ಮನೆಗೂ ಬೀಳುತ್ತದೆ ಅನ್ನೋ ನೆನಪಿರಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಬಹಿರಂಗವಾಗಿ ರಾಜಾರೋಷವಾಗಿ ಕೊಲೆ ಬೆದರಿಕೆ ಹಾಕೋರಿಗೆ ಸರ್ಕಾರ ಹೆಡೆಮುರಿ ಕಟ್ಟಬೇಕು. ಒಂದು ವೇಳೆ ರಾಜ್ಯ ಸರ್ಕಾರ ನಿಷ್ಕ್ರಿಯ ಆದಾಗ ಎನ್ ಐ ಎ ನೂ ಎಂಟ್ರಿ ಆಗುತ್ತೆ. ಕೇಂದ್ರ ಸರ್ಕಾರ ನೂ ಎಂಟ್ರಿ ಆಗುತ್ತೆ ಎಂದು ಭಾನುವಾರ ತಿಪಟೂರು- ತುರುವೇಕೆರೆ ಗಡಿಭಾಗದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ದುಷ್ಕರ್ಮಿಗಳ ಹೆಡೆಮುರಿ ಕಟ್ಟುತಿವಿ ಅಂತ ಅವರ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವುದನ್ನು ಸರ್ಕಾರ ಬಿಡಬೇಕು. ಅಂಥವರನ್ನ ರಕ್ಷಣೆ ಕೊಡುವಂತ ಒಳ ಒಪ್ಪಂದ ಬಿಡಬೇಕು. ಒಬ್ಬರ ಜೀವ ತೆಗಿತೀವಿ ಅಂತಾ ಬಹಿರಂಗವಾಗಿ ಬೆದರಿಕೆ ಹಾಕುವ ಪಟ್ಟಭದ್ರ ಹಿತಾಶಕ್ತಿಗಳಿಗೆ ಕನಿಕರ ತೋರಿಸಬೇಡಿ ಎಂದರು.

ಸರ್ಕಾರ ಆ ಸಮುದಾಯದ ಮೇಲೆ ಸಾಪ್ಟ್ ಕರ್ನಾರ್ ತೋರುವುದನ್ನು ಬಿಡಬೇಕು. ಗೃಹಸಚಿವ ಪರಮೇಶ್ವರ್ ಇದರಲ್ಲಿ ತಮ್ಮ ರಾಜಕೀಯ ಅನುಭವ ತೋರಿಸಬೇಕು. ನಿಮ್ಮ ಕೈಲಿ ಆಗದೆ ಇದ್ರೆ, ನಮ್ಮ ಕೈಲಿ ಆಗ್ತಾ ಇಲ್ಲ ಅಂತ ಕೇಂದ್ರಕ್ಕೆ ಬರೀರಿ. ಅವಾಗ ನೋಡಿ ಹತ್ತು ನಿಮಿಷಕ್ಕೆ ಎಲ್ಲವು ಹೀಗೆ ಕಂಟ್ರೋಲ್ ಗೆ ಬರುತ್ತೆ ನೋಡಿ ಎಂದು ಸೋಮಣ್ಣ ತಿವಿದರು.

ಭಾರತೀಯ ಸೈನ್ಯಕ್ಕೆ ಫ್ರೀ ಹ್ಯಾಂಡ್ ಕೊಟ್ಟ ಹಾಗೆ ರಾಜ್ಯದ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಲಿ.ದೇಶಕ್ಕೆ ಮಾರಕ ಆಗಿರುವಂತಹ ಈ ರೀತಿಯ ದುಷ್ಕರ್ಮಿಗಳಿಗೆ ಸಾಪ್ಟ್ ಕಾರ್ನರ್ ತೋರಿಸುವ ವ್ಯವಸ್ಥೆ ಆಗಬಾರದು.ಇದಕ್ಕೆ ತೀಕ್ಷಣ ವಾದ ಕ್ರಮ ಕೈಗೊಳ್ಳಬೇಕು ಬೇಕು ಎಂದು ತಾಕೀತು ಮಾಡಿದರು.

ಸಿಎಂ ಸಿದ್ದರಾಮಯ್ಯ ನವರೇ ತಮಗೆ ಬೆದರಿಕೆ ಕರೆ ಬರುತ್ತೆ ಅಂತ ಹೇಳುವಾಗ. ಇದು ಅನ್ ಪಾರ್ಚೆನೆಟ್ ಅನ್ನಬೇಕಾಗುತ್ತೆ. ಸಿದ್ದರಾಮಯ್ಯ ನವರ ಬಾಯಲ್ಲಿ ಇದೆಲ್ಲ ಬರುತ್ತೆ ಅಂದ್ರೆ ಇದು ನಿಜಾನೆ ಇರಬೇಕು. ಇನ್ನಾದರ ಅರ್ಥ ಮಾಡಿಕೊಳ್ಳ ಬೇಕು. ತಾನೇ ಅನಭಿಶಕ್ತ ದೊರೆ ಅನ್ನೋದನ್ನ ಮರಿಬೇಕು. ಬೆದರಿಕೆ ಹಾಕುವಂತಹಾ ಲೋಪರ್ಸ್ ನ ಸಮಾಜ ಘಾತಕ ಶಕ್ತಿ ಯನ್ನ ಪೊಲೀಸರಿಗೆ ಫ್ರೀ ಹ್ಯಾಂಡ್ಬಿಟ್ಟು ಹುಟ್ಟ ಡಗಿಸಬೇಕು ಎಂದು ಗುಡುಗಿದರು.

ತಮಗೆ ಸಿಎಂ ಸಿದ್ದರಾಮಯ್ಯಗೆ ಬೆದರಿಕೆ ಕರೆ ಬಂದಿದೆ ಎಂದಾಗ ನನ್ನ ಮನದಿಗೆ ತುಂಬಾ ನೋವಾಗಿದೆ. ನನ್ನ ಈ ನೋವನ್ನು ಬಗ್ಗೆ ಹರಿಸಲಾದರೂ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟು ದುಷ್ಟ ಶಕ್ತಿಗೆ ಬಲಿ ಹಾಕಲಿ ಎಂದು ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net