ಯಜಮಾನ್ರು ಇಲ್ಲದೆ ಮನೆಯೊಳಗೆ ಹೇಗೆ ಹೋಗಲಿ... ಬಾಗಿಲಲ್ಲಿ ನಿಂತು ಗೋಳಾಡಿದ ಸುರೇಶ್​ ಅಂಗಡಿ ಪತ್ನಿ

suresh angadi wife
Published on

ಬೆಳಗಾವಿ: 'ಯಜಮಾನ್ರು ಇಲ್ಲದೆ ಮನೆಯೊಳಗೆ ಹೇಗೆ ಹೋಗಲಿ.. ಅತ್ತೆಗೆ ಏನಂತ ಸಮಾಧಾನ ಪಡಿಸಲಿ.. ದೆಹಲಿಯಿಂದ ಬರಿಗೈಯಲ್ಲಿ ಬಂದಿಯಾ.. ಅಂತ ಕೇಳಿದರೆ ಏನೂ ಹೇಳಲಿ.. ಎಂದು ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಅವರು ಮನೆಯ ಬಾಗಿಲಲ್ಲಿ ನಿಂತು ಬಿಕ್ಕಿಬಿಕ್ಕಿ ಅಳುತ್ತಿದ್ದರು.

ದೆಹಲಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ನೇರವೇರಿಸಿದ ಬಳಿಕ ಕುಟುಂಬ ಸದಸ್ಯರು ಶುಕ್ರವಾರ ಬೆಳಗಾವಿ ನಿವಾಸಕ್ಕೆ ಬರುತ್ತಿದ್ದಂತೆ ಆಕ್ರಂದನ ಮುಗಿಲುಮುಟ್ಟಿತು. ಇದನ್ನೂ ಓದಿರಿ ನನ್ನ ಮಗ ಬಂದೇ ಬರುತ್ತಾನೆ… ಎಂದು ಗೋಳಾಡಿದ ಸುರೇಶ್​ ಅಂಗಡಿ ತಾಯಿ ಸೋಮವ್ವ

ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು, ಸಿಬ್ಬಂದಿ, ವಾಹನಗಳ ಚಾಲಕರು ಸುರೇಶ್​ ಅಂಗಡಿ ಅವರನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತರು.

ಕರೊನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್​ ಅಂಗಡಿ ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ದೆಹಲಿಯ ದ್ವಾರಕಾ ಸೆಕ್ಟರ್​ 24ರಲ್ಲಿರುವ ವೀರಶೈವ-ಲಿಂಗಾಯತ ಸಮುದಾಯದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮಗನ ಸಾವಿನ ಸುದ್ದಿ ಕೇಳಿದ ಅವರ ತಾಯಿ ಸೋಮವ್ವ, 'ನನ್ನ ಮಗ ವಾಪಸ್​ ಬಂದೇ ಬರ್ತಾನಾ...' ಎಂದು ಬೆಳಗಾವಿ ನಿವಾಸಕ್ಕೇ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net