ಆಸ್ಪತ್ರೆಗೆ ಹೋಗುವ ಮುನ್ನ ಈ ಪುಟ್ಟ ಕಂದಮ್ಮನ ಜತೆಯಲ್ಲಿ ಆಟವಾಡಿದ್ದ ಸುರೇಶ್​ ಅಂಗಡಿ...

suresh angadi-
Published on

ಬೆಳಗಾವಿ: ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಎಷ್ಟೇ ಒತ್ತಡದ ಕೆಲಸದಲ್ಲಿದ್ದರೂ ಆ ಮಗುವಿನ ಮುಖ ಕಂಡಾಕ್ಷಣ ತಾವು ಮಗುವಿನಂತೆ ಆಟವಾಡುತ್ತಿದ್ದ. ಅನಾರೋಗ್ಯ ನಿಮಿತ್ತ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಹೋಗುವ ಮುನ್ನವೂ ಕೊನೆಯದಾಗಿ ಆ ಪುಟ್ಟ ಕಂದಮ್ಮನ ಜತೆ ಕೆಲಕಾಲ ಕಳೆದಿದ್ದರು...

ಹೌದು, ಸುರೇಶ್​ ಅಂಗಡಿ ಅವರಿಗೆ ಮೊಮ್ಮಗಳು 2 ವರ್ಷದ ರಿದ್ದಿಶಾ ಅಂದ್ರೆ ಅಚ್ಚು ಮೆಚ್ಚು. ರಾಜಕೀಯ ಬಿಡುವಿನ ವೇಳೆ ಮನೆಯಲ್ಲಿ ಮೊಮ್ಮಗಳೊಂದಿಗೆ ಹೆಚ್ಚಾಗಿ ಕಾಲಕಳೆಯುತ್ತಿದ್ದರು. ಸುರೇಶ್ ಅಂಗಡಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ಹಿರಿಯ ಮಗಳು ಸ್ಫೂರ್ತಿ ಅಂಗಡಿಯ ಪುತ್ರಿಯೇ ಈ ರಿದ್ದಿಶಾ. ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತನ್ನ ತಾಯಿ ಜೊತೆ ದೆಹಲಿಗೆ ರಿದ್ದಿಶಾ ಪ್ರಯಾಣ ಬೆಳೆಸಿದ್ದಾರೆ. ಆದರೆ, ಆ ಕಂದಮ್ಮನಿಗೆ ಅಜ್ಜನನ್ನು ನೋಡಲು ತಾನು ಹೋಗುತ್ತಿರುವುದು ಇದೇ ಕೊನೇ... ತಾತ ಬಾರದ ಲೋಕಕ್ಕೆ ಹೋಗಿದ್ದಾರೆ... ಮತ್ತೆಂದೂ ಬರಲ್ಲ... ಎಂಬುದ್ಯಾವುದೂ ಗೊತ್ತಿಲ್ಲ. ಏನೂ ಅರಿಯದ ಕಂದಮ್ಮ, ತಾತನ ನೋಡಲು ಪ್ರಯಾಣ ಬೆಳೆಸಿದೆ. ಇದನ್ನೂ ಓದಿರಿ ಪೋಷಕ ನಟ ರಾಕ್​ಲೈನ್​ ಸುಧಾಕರ್​ ನಿಧನ

ಇನ್ನು ಸುರೇಶ್​ ಅಂಗಡಿ ಅವರು ಸಂಜೆ ವೇಳೆ ಬಿಡುವು ಸಿಕ್ಕಾಗ ಮಿರ್ಚಿ ಬಜ್ಜಿ, ಚೂಡಾ ಮಂಡಕ್ಕಿಯನ್ನು ಇಷ್ಟಪಟ್ಟು ಸೇವಿಸುತ್ತಿದ್ದರು. ಬೆಳಗಾವಿಯ ಮಹಾವೀರ ಟೀ ಸ್ಟಾಲ್​ನ ಮಿರ್ಚಿ ಮಂಡಕ್ಕಿ, ಚೂಡಾ ಚಹಾ ಅಂದ್ರೆ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net