ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಶ್ಲಾಘನೀಯ

KAKAJAVE
Published on

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಹೇಳಿಕೆ

ಚನ್ನಪಟ್ಟಣ

ನಮ್ಮ ದೇಶದ ಜನರನ್ನು ಬಲಿ ಪಡೆದು ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಉಗ್ರರನ್ನು ಸದೆಬಡೆದು ಪ್ರತೀಕಾರ ತೀರಿಸಿಕೊಂಡ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಹಾಗೂ ಸೈನಿಕರ ಕಾರ್ಯಕ್ಕೆ ದೇಶವಾಸಿಗಳು ಸದಾ ಕೃತಜ್ಞರು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ತಿಳಿಸಿದರು.

ಆಪರೇಷನ್ ಸಿಂದೂರದ ಮೂಲಕ ಉಗ್ರರ ಸದೆಬಡೆಯುತ್ತಿರುವ ಭಾರತೀಯ ಯೋಧರಿಗೆ ವೇದಿಕೆಯಿಂದ ನಗರದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಪಾಕ್ ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನಮ್ಮ ದೇಶದ ಭದ್ರತಾ ಪಡೆ ಪ್ರಾಣದ ಹಂಗು ತೊರೆದು ಯುದ್ಧ ಮಾಡುತ್ತಿದ್ದಾರೆ. ದೇಶದ ಜನರನ್ನು ಬಲಿ ಪಡೆದು, ಹೆಣ್ಣುಮಕ್ಕಳ ಸಿಂದೂರ ಅಳಿಸಿದ ಉಗ್ರರನ್ನು ಮಟ್ಟಹಾಕಿ, ಪ್ರತೀಕಾರ ತೀರಿಸಿಕೊಳ್ಳುವ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಸ್ವಾಗತಾರ್ಹ. ಯುದ್ಧದಲ್ಲಿ ಹೋರಾಡುತ್ತಿರುವ ದೇಶದ ಸೈನಿಕರ ಕುಟುಂಬಕ್ಕೆ ಎಲ್ಲರು ಬೆಂಬಲಿಸಬೇಕು ಎಂದರು.

ನಿವೃತ್ತ ಪ್ರಾಂಶುಪಾಲ ನಿಂಗೇಗೌಡ (ಎನ್‌ಜಿ) ಮಾತನಾಡಿ, ದೇಶ ಪ್ರೇಮವು ಜಾತಿ, ಧರ್ಮ ಎಲ್ಲವನ್ನೂ ಮೀರಿದೆ. ಈ ನಿಟ್ಟಿನಲ್ಲಿ ಯುದ್ಧದಲ್ಲಿ ಭಾಗಿಯಾಗಿರುವ ಸೈನಿಕರ ಕುಟುಂಬಕ್ಕೆ ಎಲ್ಲರೂ ಆತ್ಮಸ್ಥೆರ್ಯ ತುಂಬಬೇಕು ಎಂದರು. ಸಿಹಿ ಹಂಚುವ ಮೂಲಕ ಪಾಕ್ ಉಗ್ರರ ಸಂಹಾರವನ್ನು ಸಂಭ್ರಮಾಚರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net