

ಸುಂಟಿಕೊಪ್ಪ: ಪಹಲ್ಗಾಮ್ ಘೋರ ಘಟನೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಆರೋಪಿಸಿದರು.
ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಜಮಾಯತ್ ವತಿಯಿಂದ ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಹಿಂದೆಯು ಸೇನೆ ಮತ್ತು ನಾಗರಿಕರ ಮೇಲೆ ಉಗ್ರರ ದಾಳಿಗಳು ನಡೆದಿದೆ. ಆದರೆ ಉಗ್ರರ ವಿರುದ್ಧ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಾಕಾಗಿಲ್ಲ ಎಂಬುದು ಸಾಬೀತಾಗಿದೆ. ಉಗ್ರಗಾಮಿಗಳು ಯಾವುದೇ ದೇಶಕ್ಕೆ ಸೇರಿದ್ದರೂ ಅವರನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಇಬ್ರಾಹಿಂ ಹ್ಯಾಸನಿ ಖತ್ತೀಬ್, ರಜಾಕ್, ಜಮಾತ್ ಕಾರ್ಯದರ್ಶಿ ಅದ್ದೂಸ, ಮದರಸ ಅಧ್ಯಕ್ಷ ಆಶ್ರಫ್ ಹೂತ್, ಕಾರ್ಯದರ್ಶಿ ಶರೀಫ್ ಮತ್ತಿತರರು ಇದ್ದರು.