ಶತಮಾನೋತ್ಸವ, ಕೃತಿ ಬಿಡುಗಡೆ ಸಮಾರಂಭ

Published on

ಕಿನ್ನಿಗೋಳಿ: ಸಾಹಿತಿ ಅ.ಗೌ. ಕಿನ್ನಿಗೋಳಿ ಅವರ ಶತವಾನೋತ್ಸವ ಆಚರಣೆ ಹಾಗೂ ಡಾ.ಬಿ.ಜನಾರ್ದನ ಭಟ್ ಅವರ 99, 100 ಹಾಗೂ 101ನೇ ಕೃತಿಗಳ ಬಿಡುಗಡೆ ಸಮಾರಂಭ ಅ.20ರಂದು ಸಂಜೆ 4 ಗಂಟೆಗೆ ಕಿನ್ನಿಗೋಳಿ ಮೇರಿವೆಲ್ ಶಾಲೆ ಬಳಿಯ ಶ್ರೀಗಂಧ ನಿವಾಸದಲ್ಲಿ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಟಕ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಡಾ.ಕೆ.ಚಿನ್ನಪ್ಪ ಗೌಡ ಅ.ಗೌ. ಸಂಸ್ಮರಣೆ ನಡೆಸುವರು.

ಆಶ್ವೀಜಾ ಉಡುಪ ಅಚ್ಯುತ ಗೌಡರ ಕಾವ್ಯಗಳ ಗಾಯನ ವಾಡಲಿದ್ದಾರೆ. ಡಾ.ಬಿ.ಜನಾರ್ದನ ಭಟ್ಟರ 99ನೇ ಕೃತಿ ಕಪ್ಪೆ ಹಿಡಿಯುವವನ ಕಥಾ ಸಂಕಲನವನ್ನು ಬಿ.ರಾಮಚಂದ್ರ ಆಚಾರ್ಯ, ನೂರನೇ ಕೃತಿ ಕನ್ನಡ ಕಾದಂಬರಿ ವಾಲೆಯನ್ನು ಕಸಾಪ ವಾಜಿ ಅಧ್ಯಕ್ಷ ಡಾ.ಹರಿಕಷ್ಣ ಪುನರೂರು, 101ನೇ ಕೃತಿ ಹೊಸನೋಟಗಳ ಸವಾಜ ವಿಮರ್ಶಕ ಸಾಹಿತಿ ಅ.ಗೌ.ಕಿನ್ನಿಗೋಳಿ ಕೃತಿಯನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಬಿಡುಗಡೆಗೊಳಿಸಲಿದ್ದಾರೆ ಎಂದು ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಅಧ್ಯಕ್ಷ ಮಿಥುನ ಕೊಡೆತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net