ಪೆರ್ಮುದೆ ಚರ್ಚ್‌ನಲ್ಲಿ ಆಚರಣೆ

onam
Published on

ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೇಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಭಾರತೀಯ ಕೆಥೋಲಿಕ್ ಯುವಸಂಚಲನ ಘಟಕ ಆಶ್ರಯದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಓಣಂ ಹಬ್ಬ ಆಚರಿಸಲಾಯಿತು. ಐಸಿವೈಎಂ ಘಟಕ ಸದಸ್ಯರು ಹೂವಿನ ರಂಗೋಲಿ ರಚಿಸಿದರು. ವಿವಿಧ ಆಟೋಟ ಸ್ಪರ್ಧೆ, ಮನೋರಂಜನೆ ನಡೆಯಿತು. ಮಧ್ಯಾಹ್ನ ಎಲ್ಲರಿಗೂ ಓಣಂ ಸದ್ಯ ವ್ಯವಸ್ಥೆಗೊಳಿಸಲಾಯಿತು.

ಇಗರ್ಜಿ ಧರ್ಮಗುರು ಫಾ.ಹೆರಾಲ್ಡ್ ಡಿಸೋಜ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಗರ್ಜಿ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೇರಾ ಮಾತನಾಡಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಐಸಿವೈಎಂ ಪೆರ್ಮುದೆ ಘಟಕ ಅಧ್ಯಕ್ಷ ಪ್ರಶಾಂತ್ ಡಿಸೋಜ ಕಾನಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ನೀಮ ಜೋಯ್ಸ ಕ್ರಾಸ್ತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net