ಅರ್ಥಪೂರ್ಣವಾಗಿ ವಾಸವಿ ಜಯಂತಿ ಆಚರಣೆ

7-KGL-1,,
Published on

ಕೊಳ್ಳೇಗಾಲ: ಶ್ರೀ ವಾಸವಿ ಜಯಂತಿ ಅಂಗವಾಗಿ ತಾಲೂಕು ಆರ್ಯ ವೈಶ್ಯ ಸಂಘ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ವತಿಯಿಂದ ಬುಧವಾರ ಪಟ್ಟಣದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯಕ್ಕೆ ವಾಸವಿ ಜಯಂತಿ ಹಿನ್ನೆಲೆ ಅಲಂಕೃತಗೊಳಿಸಲಾಗಿತ್ತು. ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನೆರವೇರಿದವು. ಬಳಿಕ ಆರ್ಯ ವ್ಯೆಶ್ಯ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಬಸ್ ನಿಲ್ದಾಣ ಬಳಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿದರು. ಬಳಿಕ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ, ಸತ್ಯನಾರಾಯಣ ಗುಪ್ತ, ನಿರ್ದೇಶಕ ಬದ್ರಿನಾರಾಯಣ್, ಅಮರನಾಥ್, ಸತೀಶ್, ಮಣಿಕಂಠಪ್ರಸಾದ್, ರೂಪೇಶ್, ವಂಶಿಕೃಷ್ಣ, ಸಂಜಯ್, ರಾಮಕೃಷ್ಣ, ಶ್ರೀನಿವಾಸ್, ಗಿರೀಶ್, ವೆಂಕಟೇಶ್, ಕನಕರಾಜ್, ಶಶಿಧರ್, ಸಂತೋಷ್, ಪವನ್, ಶ್ರೀವಾಸವಿ ಮಹಿಳಾ ಸೇವಾ ಸಂಘದ ಸಹ ಕಾರ್ಯದರ್ಶಿ ರೂಪಾ ರಾಜೇಶ್ , ನಿರ್ದೇಶಕಿ ಭವ್ಯಾ ಅಮರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net