ಸರಳವಾಗಿ ಅಂಬಿ ಜನ್ಮ ದಿನ ಆಚರಣೆ

20250529_102503
Published on

ಶ್ರೀರಂಗಪಟ್ಟಣ: ನಟ ಅಂಬರೀಶ್ ಅವರ 73ನೇ ಜನ್ಮ ದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಗುರುವಾರ ಅಂಬರೀಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಕಟೌಟ್‌ಗೆ ಕ್ಷೀರಾಭಿಷೇಕ ನಡೆಸಿ ಜತೆಗೆ ನೆಚ್ಚಿನ ಅಂಬಿ ಪರ ಜಯಘೋಷ ಕೂಗಿ ಪೂಜೆ, ಪುಷ್ಪಾರ್ಚನೆ ಅರ್ಪಿಸಿ ಅಂಬರೀಶ್ ಅವರ ಕೊಡುಗೆ ಮತ್ತು ಸಹಾಯವನ್ನು ಸ್ಮರಿಸಿದರು.

ಬಳಿಕ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಒಳ ರೋಗಿಗಳು ಹಾಗೂ ವೈದ್ಯರ ತಂಡಕ್ಕೆ ಹಣ್ಣುಗಳನ್ನು ನೀಡಿದರು. ಟಿ.ಎಂ.ಹೊಸೂರು ಮಹೇಶ್, ಶಾಮಿಯಾನ ಪುಟ್ಟರಾಜು, ನಗುವನಹಳ್ಳಿ ಮಹದೇವಸ್ವಾಮಿ, ಗಂಗಾಧರ್ ಕೆ.ಶೆಟ್ಟಹಳ್ಳಿ, ಸುನೀಲ್, ಗೌಡಹಳ್ಳಿ ದೇವರಾಜು, ಗಣಂಗೂರು ನಾಗರಾಜು, ಕಾಬೂಲ್, ಸ್ವಾಮಿಗೌಡ, ಶಿವರಾಮು, ಶಂಕರ್‌ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net