ಶಾಂತಿ, ಸೌಹಾರ್ದದಿಂದ ಉರುಸ್​ ಆಚರಿಸಿ

14mkh1
Published on

ಎಂ.ಕೆ.ಹುಬ್ಬಳ್ಳಿ :ಇಲ್ಲಿನ ಪೀರ ಮುಗುಟಶಾವಲಿ ದರ್ಗಾ ಗಂಧ ಸಂದಲ ಮತ್ತು ಉರುಸ್​ ಆಚರಣೆಯ ಆಡಳಿತಾಧಿಕಾರಿಯನ್ನಾಗಿ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರನ್ನು ನೇಮಿಸಿ, ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಸೋಮವಾರ ಆದೇಶ ಹೊರಡಿಸಿದ್ದಾರೆ. ಏ.14 ರಿಂದ 16ರ ವರೆಗೆ ನಡೆಯಲಿರುವ ಉರುಸ್​ ವಿಷಯವಾಗಿ ಎರಡು ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯವಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇಮಕ ಮಾಡಿ ಆದೇಶಿಸಿದ್ದಾರೆ.

ಸಭೆ ನಡೆಸಿದ ಆಡಳಿತಾಧಿಕಾರಿ: ಇಲ್ಲಿನ ಪಪಂ ಕಚೇರಿಯಲ್ಲಿ ಸೋಮವಾರ ಸಂಧಾನ ಸಭೆ ನಡೆಸಿದ ಆಡಳಿತಾಧಿಕಾರಿ, ಎಸಿ ಪ್ರಭಾವತಿ ಕೀರಪುರ ಎರಡು ಗುಂಪಿನ ಪ್ರಮುಖರೊಂದಿಗೆ ಸಮಾಲೋಚಿಸಿ ಎಲ್ಲರೂ ಕೂಡಿ ಜಾತ್ರೆ, ಉತ್ಸವ ಹಾಗೂ ಉರುಸ್​ ಆಚರಿಸಬೇಕು ಎಂದು ತಿಳಿವಳಿಕೆ ನೀಡಿದರು.

ಈ ವೇಳೆ ಎರಡು ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಆಡಳಿತಾಧಿಕಾರಿ ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಅನಗತ್ಯವಾಗಿ ತಂಟೆ&ತಕರಾರು ಮಾಡಿದಲ್ಲಿ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ತಹಸೀಲ್ದಾರ್​ ರವೀಂದ್ರ ಹಾದಿಮನಿ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್​ಐ ಪ್ರವಿಣ ಗಂಗೊಳ್ಳಿ, ಕಂದಾಯ ನಿರೀಕ ಎಂ.ಎಂ.ನಿರಲಗಿ, ಜಿಪಂ ಮಾಜಿ ಸದಸ್ಯ ಕ್ಕೀರಪ್ಪ ಸಕ್ರೆನ್ನವರ, ಪಪಂ ಅಧ್ಯ ಪ್ರಕಾಶ ಕೊಡ್ಲಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net