

ಕಲಾದಗಿ: ಹಿಂದು- ಮುಸ್ಲಿಮರ ಭಾವೈಕ್ಯದ ಮೊಹರಂ ಹಬ್ಬವನ್ನು ಎಲ್ಲರೂ ಸೇರಿ ಸೌಹಾರ್ದದಿಂದ ಆಚರಿಸಬೇಕೆಂದು ಗ್ರಾಮೀಣ ಸಿಪಿಐ ಬಿ.ಎಂ. ಸೂರಿ ಹೇಳಿದರು.
ಗ್ರಾಮದ ಪೊಲೀಸ್ ಠಾಣೆಯಲ್ಲಿ ಮೊಹರಂ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಾಂತಿಪಾಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಹಬ್ಬದ ಅಚರಣೆ ಸಂದರ್ಭದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಬೇಕು. ಇಲಾಖೆ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದರು.
ಮುಖಂಡರಾದ ಜೆ.ಡಿ. ಚೌದರಿ, ಮಲ್ಲಪ್ಪ ಜಮಖಂಡಿ ಮಾತನಾಡಿದರು.
ಇದನ್ನೂ ಓದಿ: ಐವರು ದುಷ್ಕರ್ಮಿಗಳ ಬಂಧನ
ಠಾಣಾಧಿಕಾರಿ ಚಂದ್ರಶೇಖರ ಹೆರಕಲ್ಲ, ಹೆಚ್ಚುವರಿ ಪಿಎಸ್‌ಐ ಎಲ್.ಎಚ್. ಡೋಣಿ, ಮುಖಂಡರಾದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಬ್ರಾಹಿಂ ಸೋಲ್ಜರ್, ಕೆ.ಆರ್.ಶಿಲ್ಪಿ, ಹಸನ್ಮಹದ ರೋಣ, ದಯಾನಂದ ಆಲಗುಂಡಿ, ಸಿಡ್ಲೆಪ್ಪ ಮಾದರ, ರಮೇಶ ಮಾದರ, ರಾಜಾಸಾಬ್ ಗೋಠೆ, ಅಂಜಲಿ ಬಾನು, ಹುಸೇನಸಾಬ್ ನದಾಫ್, ನೂರಸಾಬ್ ಫೀರಜಾದೆ ಇತರರಿದ್ದರು.