More

    ಐವರು ದುಷ್ಕರ್ಮಿಗಳ ಬಂಧನ

    ಜಮಖಂಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೂವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಐವರು ದುಷ್ಕರ್ಮಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ಒಂದು ಲಾಂಗ್, ಪಿಸ್ತೂಲ್ ತರಹದ ಏರ್‌ಗನ್, ಎರಡು ಮೊಬೈಲ್ ಹಾಗೂ 5350 ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಪರಾರಿಯಾದ ಇನ್ನೋರ್ವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

    ತಾಲೂಕಿನ ಮುತ್ತೂರ ಆರ್‌ಸಿ ಹತ್ತಿರದ ಪಂಚಾಯಿತಿ ಕಟ್ಟಡವೊಂದರಲ್ಲಿ ಸಂಶಯಾಸ್ಪದವಾಗಿ ವಾಸಿಸುತ್ತಿದ್ದ 6 ಜನರ ಮೇಲೆ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಪಿಎಸ್‌ಐ ಮಹೇಶ ಸಂಖ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಸಂಚು ರೂಪಿಸಿರುವುದು ಬಯಲಾಗಿದೆ.

    ರಾಯಬಾಗ ತಾಲೂಕಿನ ಕಣದಾಳ ಗ್ರಾಮದ ಕಿರಣ ಭೀಮಪ್ಪ ಚಿಗರಿ (21), ಪರಶುರಾಮ ಭರಮಪ್ಪ ಕರಿಹೊಳೆ (30), ಬಸ್ತವಾಡ ಗ್ರಾಮದ ಸಿದ್ದಪ್ಪ ಶಿವಪ್ಪ ಲಟ್ಟೆ (30), ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಿದ್ಧಾರ್ಥ ಶಿವಾನಂದ ಹಿರೇಮಠ (21), ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ದಾನೇಶ ಮಾರುತಿ ಭಜಂತ್ರಿ (19) ಅವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಜಮಖಂಡಿ ನಗರದ ಸಂಜು ವಿಠ್ಠಲ ಕಡಕೋಳ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಮಕ್ಕಳ ಕ್ರಿಯಾಶೀಲತೆಗೆ ಕ್ರೀಡೆಗಳು ಅವಶ್ಯ

    ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು, ಡಿಎಸ್‌ಪಿ ಶಾಂತವೀರ ಹಾಗೂ ಸಿಪಿಐ ಗುರುನಾಥ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಎಎಸ್‌ಐ ಕೆ.ಪಿ.ಸವದತ್ತಿ, ಐ.ಎಸ್.ಬಿರಾದಾರ, ಎಸ್.ಎಸ್.ನಾಯಿಕ್, ಸಿಎಚ್‌ಸಿಗಳಾದ ಎ.ವಿ. ಗುಳಬಾಳ, ಬಿ.ಪಿ. ಕುಸನಾಳೆ, ಎಲ್.ಎಚ್. ಲಾಯಣ್ಣವರ, ಎಸ್.ಜಿ. ಸಾಲಮನಿ, ವಿ.ಎಸ್. ಜಾಧವ, ಡಬ್ಲುೃಎಚ್‌ಸಿ ಎಸ್.ಎಸ್. ಹಿರೇಮಠ, ಸಿಪಿಸಿಗಳಾದ ಎನ್.ಎಂ. ಬಡಿಗೇರ, ಪಿ.ಎಂ. ಹೊಸಮನಿ, ಎಸ್.ಎಸ್. ಜಕಾತಿ, ಆರ್.ಎಚ್. ಪೂಜಾರಿ, ಬಿ.ಬಿ. ವನಜೋಳ, ಎಂ.ಎಸ್. ಸವದಿ, ಎನ್.ಬಿ. ಬಿಸಲದಿನ್ನಿ, ಗನಸೈದ ನಡಗಡ್ಡಿ, ಬಸವರಾಜ ಜಗಲಿ, ಚಂದ್ರಶೇಖರ ಜೆಟ್ಟಪ್ಪಗೋಳ ಭಾಗವಹಿಸಿದ್ದರು. ಸಿಬ್ಬಂದಿ ಕಾರ್ಯಕ್ಕೆ ಡಿಎಸ್‌ಪಿ ಶಾಂತವೀರ ಈ ಶ್ಲಾಘಿಸಿ ನಗದು ಬಹುಮಾನ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts