ಶಾಲೆ-ಕಾಲೇಜಿನಲ್ಲಿ ತಪ್ಪದೆ ಆಚರಿಸಿ

ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪ್ರಮುಖರಾದ ಕೆ.ಲಕ್ಷ್ಮಣ, ಸಿ.ಎ.ಚನ್ನಪ್ಪ, ಸಿ.ವೆಂಕಟೇಶ್, ಎಚ್.ಗುಂಡಪ್ಪ, ಜಿ.ಕೆ.ತಿಪ್ಪೇಶ್ ಇತರರಿದ್ದರು.

Published on

ಕಂಪ್ಲಿ: ತಹಸಿಲ್ ಕಚೇರಿ ಸಭಾಂಗಣದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಡಾ.ಬಾಬು ಜಗಜೀವನರಾಮ್, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.

ನಗರದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಏ.5ರಂದು ಡಾ.ಬಾಬು ಜಗಜೀವನರಾಮ್ ಹಾಗೂ ಏ.14ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ತಪ್ಪದೆ ಜಯಂತಿಗಳನ್ನು ಅರ್ಥಪೂರ್ಣವಾಗಿ ಅಚರಿಸಬೇಕು. ಲೋಪದೋಷ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ವಿವಿಧ ಇಲಾಖೆ ಅಧಿಕಾರಿಗಳಾದ ಎಸ್.ಡಿ.ರಮೇಶ್, ಟಿ.ಎಂ.ಬಸವರಾಜ, ಲತೀಫಾಬೇಗಮ್, ಅಪರಂಜಿ, ಎಂ.ರೇವಣ್ಣ, ಪ್ರಮುಖರಾದ ಕೆ.ಲಕ್ಷ್ಮಣ, ಜಿ.ರಾಮಣ್ಣ, ಸಿ.ಎ.ಚನ್ನಪ್ಪ, ಸಿ.ವೆಂಕಟೇಶ, ಎಚ್.ಗುಂಡಪ್ಪ, ಜಿ.ಕೆ.ತಿಪ್ಪೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net