ಎಸ್​ಐಟಿ ವಿರುದ್ಧ ಸಿಡಿದೆದ್ದ ಸಿಡಿ ಲೇಡಿ: ವಿಚಾರಣೆ ನಡುವೆಯೇ ಕಮಿಷನರ್​ಗೆ ದೂರು ಪತ್ರ ಬರೆದಿದ್ದೇಕೆ?

CD Lady
Published on

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿಡಿ ಕೇಸ್​ನ 'ಸಂತ್ರಸ್ತ' ಯುವತಿ ಎಸ್​ಐಟಿ ವಿರುದ್ಧ ಪೊಲೀಸ್​ ಕಮಿಷನರ್​ಗೆ ಪತ್ರ ಬರೆದಿದ್ದಾಳೆ.

ಆರೋಪಿಯನ್ನ ಬಿಟ್ಟು ನನ್ನನ್ನ ನಿರಂತರ ವಿಚಾರಣೆ ಮಾಡುತ್ತಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿಚಾರಣೆ ನೆಪದಲ್ಲಿ ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ನಗರ ಪೊಲೀಸ್​ ಆಯುಕ್ತರಿಗೆ ಸಿಡಿ ಲೇಡಿ ದೂರಿನ ಪತ್ರ ಕಳಿಸಿದ್ದಾಳೆ. ಇದನ್ನೂ ಓದಿರಿ ಸಿಡಿ ಲೇಡಿ ಜತೆ ಸುಧಾಕರ್​ ನಂಟು? ಈ ಬಗ್ಗೆ ಮೌನ ಮುರಿದ ಮಾಜಿ ಸಚಿವ

ನಾನು ನೀಡಿದ ಅತ್ಯಾಚಾರ ಪ್ರಕರಣ ದೂರಿನ ಪ್ರಕರಣದಲ್ಲಿ ಆರೋಪಿಯನ್ನ ರಕ್ಷಿಸುವ ಸಲುವಾಗಿ ನನ್ನ ವಿರುದ್ಧ ಷಡ್ಯಂತರ ಮಾಡಿ ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಲಾಗುತ್ತಿದೆ ಎಂದು ಆರೋಪಿಸಿರುವ ಸಿಡಿ ಲೇಡಿ, ರಮೇಶ್​ ನೀಡಿರೋ ದೂರಿನಲ್ಲಿ ನನ್ನ ಹೆಸರಿಲ್ಲ. ನಾನು ಕೊಟ್ಟಿರುವ ದೂರಿನಲ್ಲಿ ರಮೇಶ್​ ಹೆರಸನ್ನ ನೇರವಾಗಿಯೇ ಪ್ರಸ್ತಾಪಿಸಿದ್ದೇನೆ. ಆದರೂ ಅವರ ವಿಚಾರಣೆ ನಡೆಯುತ್ತಿಲ್ಲ. ನಾನು ವಾಸವಿದ್ದ ಆರ್​ಟಿ ನಗರ ಪಿಜಿ ಮತ್ತು ಕೃತ್ಯ ನಡೆದ ರಮೇಶ್​ ಜಾರಕಿಹೊಳಿಯ ಮಂತ್ರಿ ಅಪಾರ್ಟ್​ಮೆಂಟ್​ಗೆ ನನ್ನನ್ನು ಕರೆದೊಯ್ದು ಪಂಚನಾಮೆ ಮಾಡಿ ಬಳಿಕ ನನ್ನ 161ರ ಅಡಿ ಹೇಳಿಕೆಯ ಮುಂದುರಿವರಿದ ವಿಚಾರ ದಾಖಲಿಸಿಕೊಳ್ಳಲಾಗಿದೆ. ಇದೆಲ್ಲವನ್ನೂ ಗಮನಿಸುತ್ತಿದ್ದರೆ ನಾನು ಆರೋಪಿಯೋ? ಸಂತ್ರಸ್ಥೆಯೋ? ಎಂಬ ಅನುಮಾನ ಮೂಡಿದೆ ಎಂದು ಅಸಮಾಧಾನ ಹೊರಹಾಕಿದ್ದಾಳೆ.

ಪ್ರಕರಣದ ಆರೋಪಿಗೆ ಕೇವಲ ಮೂರು ಗಂಟೆ ಕಾಲ ವಿಚಾರಣೆ ನಡೆಸಿ ಅವರನ್ನ ಮುಕ್ತವಾಗಿ ಓಡಾಡಿಕೊಂಡು ಇರಲು ಬಿಟ್ಟ ಎಸ್​ಐಟಿ ತಂಡ, ನನನ್ನು ನಿರಂತರವಾಗಿ ಒಂದು ದಿನವೂ ಬಿಡದಂತೆ ಹೇಳಿಕೆಗಳನ್ನ ಪಡೆಯುತ್ತಿದ್ದಾರೆ. ನಾನು ಪ್ರಕರಣ ದೂರುದಾರಳಾಗಿದ್ದು, ನನ್ನನ್ನೇ ಚಾರಿತ್ರ್ಯವಧೆ ಮಾಡುವಂತಹ ಷಡ್ಯಂತ್ರವನ್ನ ರಮೇಶ್​ ಜಾರಕಿಹೊಳಿ ಮಾಡುತ್ತಿದ್ದು, ಎಸ್​ಐಟಿ ಅಧಿಕಾರಿಗಳ ಮೇಲೆ ಸರ್ಕಾರದ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಅತ್ಯಾಚಾರದ ಸಂತ್ರಸ್ತೆ ಎಂಬುದನ್ನ ಮರೆಮಾಚಲು ಅನೇಕ ಸೃಷ್ಟಿತ ಸುದ್ದಿಗಳನ್ನ ಅವಹೇಳನಾಕಾರಿ ಪ್ರಸಾರ ಮಾಡಲಾಗುತ್ತಿದೆ. ನನ್ನ ಸಹಮತ ಇಲ್ಲದೆ ಈ ಪ್ರಕರಣಕ್ಕೆ ಗೃಹ ಇಲಾಖೆ ವಿಶೇಷ ಸರ್ಕಾರಿ ಅಭಿಯೋಜಕರನ್ನ ನೇಮಕ ಮಾಡಿರುವುದಕ್ಕೆ ನನ್ನ ಆಕ್ಷೇಪ ಇದೆ. ದಯವಿಟ್ಟು ನೀವು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ಮಾಡಿ ನನಗೆ ನ್ಯಾಯ ಕೊಡಿಸಬೇಕು ಎಂದು ಯುವತಿ ಪತ್ರದ ಮೂಲಕ ಮನವಿ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net