ಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ

ashok jagadeesh cd case
Published on

ಬೆಂಗಳೂರು: ಸಚಿವ ಆರ್.ಅಶೋಕ್ ಮತ್ತು ಕೆಲ ಐಪಿಎಸ್ ಅಧಿಕಾರಿಗಳ ವಿರುದ್ಧ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರ ವಕೀಲ ಜಗದೀಶ್​ ವಾಗ್ದಾಳಿ ನಡೆಸಿದ್ದಾರೆ.

ನಾನು ನಂದಿ ಅಲ್ಲ, ಜಗದೀಶ! ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ. ಯಾರಾದ್ರೂ ನನ್ನನ್ನು ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದು ಬುಧವಾರ ಫೇಸ್​ಬುಕ್​ ಲೈವ್​ನಲ್ಲಿ ಕಿಡಿಕಾರಿದ ಜಗದೀಶ್​, ನನ್ನ ವಿರುದ್ಧ 13 ಕೇಸ್​ ದಾಖಲಾಗಿತ್ತು. ನನ್ನ ವಿರುದ್ಧದ ಎಲ್ಲ ಕೇಸ್​ಗಳು ಖುಲಾಸೆ ಆಗಿವೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ಬಂದವನು. ಕೆಲ ಐಪಿಎಸ್ ಅಧಿಕಾರಿಗಳು‌ ಅಕ್ರಮವೆಸಗಿದ್ದಾರೆ. ಅದನ್ನ ಬಿಚ್ಚಿಡಲೇ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿರಿ ಕರೊನಾ ಸೋಂಕು: ಮಾಜಿ ಪ್ರಧಾನಿ ದೇವೇಗೌಡ ಆಸ್ಪತ್ರೆಗೆ ದಾಖಲು

ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್‌ ವಿರುದ್ಧ ಗರಂ ಆದ ವಕೀಲ ಜಗದೀಶ್​, ಕೋಡಿಗೆಹಳ್ಳಿ ಠಾಣಾ ಇನ್​ಸ್ಪೆಕ್ಟರ್ ಆಗಿದ್ದಾಗ ನನ್ನ ವಿರುದ್ಧ ಅಂದಿನ ಗೃಹ ಮಂತ್ರಿ ಆರ್​. ಅಶೋಕ್ ಅಣತಿಯಂತೆ ಸುಳ್ಳು ಕೇಸ್ ದಾಖಲು ಮಾಡಿದ್ದರು. ಓರ್ವ ಐಪಿಎಸ್ ಅಧಿಕಾರಿ ಆ ನಾಯಕನಿಗೆ ಬಕೆಟ್ ಹಿಡಿದು ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲು ಹೊರಟಿದ್ದರು. ಸುಳ್ಳು‌ ದೂರಿನಿಂದ‌ ನನ್ನ ಕುಟುಂಬ ದೂರವಾಯ್ತು, ನನ್ನಿಂದ ಹೆಂಡತಿ‌- ಮಕ್ಕಳು ದೂರವಾದರು. ಕೊಡಿಗೆಹಳ್ಳಿಯ‌ ಅಶ್ವಥ್ ನಾರಾಯಣಗೌಡರಿಂದ ನನ್ನ ವಿರುದ್ಧ ದೂರು ದಾಖಲಾಗಿತ್ತು. ಈತ ಕೊಡಿಗೆಹಳ್ಳಿಯ ಬಿಜೆಪಿ‌ ಮುಖಂಡ ಎಂದು ಕಿಡಿಕಾರಿದರು.

ನನ್ನ ವಿರುದ್ಧದ ಎಲ್ಲ ಕೇಸ್​ಗಳು ಖುಲಾಸೆ ಆಗಿವೆ. ನಾವು ಕ್ಲೀನ್​ಹ್ಯಾಂಡ್, ನಮ್ಮ ಚಾರಿತ್ರ್ಯವಧೆ ಮಾಡೋದು ಸರಿಯಲ್ಲ. ಯಾರಾದ್ರೂ ನನ್ನನ್ನ ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದ ಜಗದೀಶ್​ ಎಚ್ಚರಿಸಿದರು.

ಸಿಡಿ ಕೇಸ್​ನ ಯುವತಿಯನ್ನ ಕುಟುಂಬದವರೇ ಕೈಬಿಟ್ಟಾಗ ನಾನೇ ಆಕೆಯ ಸಹೋದರನಾಗಿ‌‌ ನ್ಯಾಯ ಕೊಡಿಸುತ್ತಿದ್ದೇನೆ. ಎಸ್ಐಟಿ ವಿರುದ್ಧ ಕಿಡಿಕಾರಿದ ಜಗದೀಶ್​, ನ್ಯಾಯದ ವಿರುದ್ಧ ಹೋರಾಟದಲ್ಲಿ ನಾನು ಡೆಸ್ಟ್ರಾಯ್ ಆಗಲು ಸಿದ್ಧ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net