

ಬೆಳಗಾವಿ: ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆಗೆ ಹಾಜರಾಗಬೇಕಿದ್ದ ರಮೇಶ್ ಜಾರಕಿಹೊಳಿ ಇಂದೂ ಬರುತ್ತಿಲ್ಲ.
ಸಿಡಿ ಕೇಸ್ನ 'ಸಂತ್ರಸ್ತ' ಯುವತಿಯನ್ನು ಹಲವು ಬಾರಿ ವಿಚಾರಣೆ ಮಾಡಿರುವ ಎಸ್ಐಟಿ, ಜಾರಕಿಹೊಳಿಗೆ ಏ.20ರಂದು ವಿಚಾರಣೆಗೆ ಹಾಜರ್ ಆಗುವಂತೆ ಗೋಕಾಕ್ಗೆ ಹೋಗಿ ನೋಟಿಸ್ ಕೊಟ್ಟಿತ್ತು.
ಇತ್ತೀಚಿಗೆ ಕರೊನಾ ಪಾಸಿಟಿವ್ ಬಂದಿದ್ದರಿಂದ ಜಾರಕಿಹೊಳಿ ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದಾರೆ. ಸದ್ಯ ನೆಗೆಟಿವ್ ಎಂದು ವರದಿ ಬಂದರೂ ವಿಚಾರಣೆಗೆ ಹೋಗುತ್ತಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಹೊರಗಡೆ ಓಡಾಡದಂತೆ ಹಾಗೂ ದೂರದ ಊರುಗಳಿಗೆ ಪ್ರಯಾಣ ಮಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸದಲ್ಲಿಯೇ ರೆಸ್ಟ್ ಮಾಡುತ್ತಿದ್ದಾರೆ.