

ಬೆಂಗಳೂರು: ಮಾಜಿ ಸಚಿವರ ಲೈಂಗಿಕ ವಿವಾದ ಪ್ರಕರಣದ ಸಿಡಿ ಲೇಡಿ ಕಬ್ಬನ್ ಪಾಕ್ ಪೊಲೀಸ್ ಠಾಣೆಗೆ ಬಂದಿಲ್ಲ. ಸೋಮವಾರ ಬೆಳಗ್ಗೆ 10ಕ್ಕೆ ವಿಚಾರಣೆಗೆ ಬರುವಂತೆ ಇನ್ಸ್ಪೆಕ್ಟರ್ ಮಾರುತಿ ನೋಟಿಸ್ ಜಾರಿ ಮಾಡಿದ್ದರು.
ಮಾ.2ಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರಿನ ಸಂಬಂಧ ಹೇಳಿಕೆ ನೀಡುವಂತೆ ಸೂಚನೆ ಕೊಟ್ಟಿದ್ದರು. ಆದರೆ, ಗಂಟೆ 11 ಆದರೂ ಇನ್ನೂ ಯುವತಿ ಪೊಲೀಸ್ ವಿಚಾರಣೆಗೆ ಬಂದಿಲ್ಲ. ಇನ್ಸ್ಪೆಕ್ಟರ್ಗೆ ಅಥವಾ ಪೊಲೀಸ್ ಠಾಣೆ ದೂರವಾಣಿ ಕರೆ, ಇಮೇಲ್ ಸಹ ಮಾಡಿಲ್ಲ. ಇದೊಂದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಈ ಕಡೆ ಸರ್ಕಾರದ ಸೂಚನೆ ಪಾಲನೆ ಮಾಡಬೇಕು. ಈ ಕಡೆ ಯುವತಿ ಯಾವ ನಿರ್ಧಾರಕ್ಕೆ ಬರುತ್ತಾಳೆ ಎಂಬ ಸುಳಿವು ಸಹ ಪೊಲೀಸರಿಗೆ ಇಲ್ಲ. ಆಕೆ ಏನಾದರೂ ಕೋಟ್೯ ಮೊರೆ ಹೋದರೆ ಪೊಲೀಸರಿಗೆ ಸಂಕಷ್ಟ ಎದುರಾಗಲಿದೆ.
ಮಾಜಿ ಸಚಿವರು ನಿರೀಕ್ಷಣಾ ಜಾಮೀನು ಕೋರಿ ಕೋಟ್೯ ಮೊರೆ ಏನಾದರೂ ಹೋಗುತ್ತಾರೋ ನೋಡಬೇಕಾಗಿದೆ. ಇತ್ತ ಪೊಲೀಸರು ಸಹ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಕೇಸಿನಲ್ಲಿ ಯುವತಿಯನ್ನು ಬಂಧಿಸಿ ಬಿಡುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿದ್ದು, ಸೆಕ್ಸ್ ಸಿಡಿ ಪ್ರಕರಣ ಮತ್ತಷ್ಟು ರೋಚಕ ತಿರುವು ಪಡೆಯಲಿದೆ.