

ದಾವಣಗೆರೆ: ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಮಾ.2ರಂದು ಬಿಡುಗಡೆ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಉಂಟಾದ ಅಲ್ಲೋಲ-ಕಲ್ಲೋಲ ಇನ್ನೂ ನಿಂತಿಲ್ಲ. ಇಂದು ಆ ಸಿಡಿ ಕೇಸ್ನ 'ಸಂತ್ರಸ್ತ' ಯುವತಿಯೇ ಜಾರಕಿಹೊಳಿ ವಿರುದ್ಧ ಲಿಖಿತವಾಗಿ ದೂರು ಬರೆದು ತನ್ನ ವಕೀಲರ ಮೂಲಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಭಾರಿ ಸಂಚಲ ಮೂಡಿಸಿದ್ದಾಳೆ. ಈ ನಡುವೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಿಡಿ ಪ್ರಕರಣ ಕುರಿತು ಹಾಸ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, 'ಬ್ಯಾಡಪ ನಮಗೆ ಸಿಡಿ ವಿಚಾರ. ಆ ಸಿಡಿ ತಗೊಂಡು ನಾವೇನು ಮಾಡೋಣಾ? ನಮಗೆಲ್ಲ ವಯಸ್ಸಾಗಿದೆ' ಎಂದು ತಮಾಷೆ ಮಾಡಿದರು. 'ಸಿಡಿ ಬಗ್ಗೆ ನಾನು ಮಾತನಾಡಲ್ಲ, ಪರಮೇಶ್ವರ ನಾಯ್ಕ ಮಾತನಾಡ್ತಾರೆ' ಎನ್ನುತ್ತಲೇ ಹೊರಟುಹೋದರು. ಇದನ್ನೂ ಓದಿರಿ ಜಾರಕಿಹೊಳಿ ವಿರುದ್ಧ ದೂರು ಕೊಟ್ಟ ಯುವತಿ: ಆಕೆ ಬರೆದ ದೂರಿನ ಪ್ರತಿ ಇಲ್ಲಿದೆ ನೋಡಿ