ರಾಜಧಾನಿಯಲ್ಲಿ ಒಂದೇ ದಿನ 104 ಜೂಜುಕೋರರ ಬಂಧನ; ನಗರದ ಕೆಲವು ಕ್ಲಬ್​ಗಳ ಮೇಲೆ ದಾಳಿ..

Gambling
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 104 ಜೂಜುಕೋರರನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿಗಳು ನಗರದ ಕೆಲವು ಪ್ರಮುಖ ಕ್ಲಬ್​ಗಳ ಮೇಲೆ ದಾಳಿ ನಡೆಸಿ ಈ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ನಗರದಲ್ಲಿ ಸಂಪಿಗೆಹಳ್ಳಿ, ಹಲಸೂರು, ಬಾಣಸವಾಡಿ, ಇಂದಿರಾನಗರದಲ್ಲಿರುವ ಜೂಜು ಅಡ್ಡೆಗಳ ಮೇಲೆ ಪೊಲೀಸರು ಶನಿವಾರ ತಂಡೋಪತಂಡವಾಗಿ ದಾಳಿ ನಡೆಸಿದ್ದಾರೆ. ಜೂಜು ಅಡ್ಡೆಗಳ ವಿರುದ್ಧದ ಅಭಿಯಾನದ ಸಲುವಾಗಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಜೂಜುಕೋರರಿಂದ ಒಟ್ಟು 4 ಲಕ್ಷ ರೂ. ನಗದು, ಬೆಟ್ಟಿಂಗ್​ ಕಾಯಿನ್​ಗಳನ್ನು ಜಪ್ತಿ ಮಾಡಲಾಗಿದೆ.

ಸಂಪಿಗೆಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಕಿಂಗ್ಸ್​ ವಿನ್ನರ್​ ಕ್ಲಬ್​ ಮೇಲೆ ದಾಳಿ ನಡೆಸಿ ಬೆಟ್ಟಿಂಗ್​ ಕಾಯಿನ್ಸ್​, ಟೇಬಲ್​, ಕುರ್ಚಿಗಳನ್ನು ಜಪ್ತಿ ಮಾಡಲಾಗಿದೆ. ಹಲಸೂರು ಠಾಣಾ ವ್ಯಾಪ್ತಿಯ ಸ್ಟಾರ್​ ಲಿಯೋನ್ಸ್​ ಕ್ಲಬ್​, ಬಾಣಸವಾಡಿಯ ಗೌರಿ ಸ್ಪೋರ್ಟ್ಸ್​​ ಆ್ಯಂಡ್​​ ರಿಕ್ರಿಯೇಷನಲ್​ ಅಸೋಸಿಯೇಷನ್​, ಇಂದಿರಾನಗರ ಠಾಣಾ ವ್ಯಾಪ್ತಿಯ ಕ್ಯಾಂಬ್ರಿಡ್ಜ್​ ರಿಕ್ರಿಯೇಷನಲ್​ ಕ್ಲಬ್​ ಮೇಲೆ ದಾಳಿ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net