More

    ಜಾಗ ಕಬಳಿಸಲು ಸಹೋದರರಿಬ್ಬರ ರೌಡಿಸಂ; ವೃದ್ಧ ದಂಪತಿಯಿಂದ ಪೊಲೀಸರಿಗೆ ದೂರು

    ಬೆಂಗಳೂರು: ಅಣ್ಣ-ತಮ್ಮಂದಿರಿಬ್ಬರು ರೌಡಿಸಂ ತೋರುತ್ತಿರುವ ಜತೆಗೆ ತಮ್ಮ ಸ್ವತ್ತಿಗೆ ಅತಿಕ್ರಮಣವಾಗಿ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡಜಾಲದ ಯರ್ತಗಾನಹಳ್ಳಿಯ ಗೌರಮ್ಮ-ನರಸಿಂಹಯ್ಯ ದಂಪತಿ ಸಿಸಿಬಿ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಯಲಹಂಕದ ಅಟ್ಟೂರು ಗ್ರಾಮದಲ್ಲಿ ತನ್ನ ಪತಿ ನರಸಿಂಹಯ್ಯ ಅವರ ಪಿತ್ರಾರ್ಜಿತ ಜಾಗವಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳೂ ಇವೆ. ಅದಾಗ್ಯೂ ಅಟ್ಟೂರು ಗ್ರಾಮದ ರೌಡಿಶೀಟರ್​ಗಳಾದ ನಾರಾಯಣ ಮತ್ತು ಆತನ ತಮ್ಮ ಚಂದ್ರು ಅಲಿಯಾಸ್ ವಾಲ್ಮೀಕಿ ಚಂದ್ರು ಪ್ರತಿದಿನ ಆ ಜಾಗಕ್ಕೆ ಬಂದು ಅದು ತಮ್ಮದು ಎಂದು ತಂಟೆ-ತಕರಾರು ಮಾಡುತ್ತಿದ್ದಾರೆ.

    ನಿನ್ನೆ ಸಂಜೆ ಕೂಡ ನಾನು ಪತಿಯೊಂದಿಗೆ ಆ ಸ್ಥಳಕ್ಕೆ ಹೋಗಿದ್ದಾಗ ನಾರಾಯಣ ಮತ್ತು ಚಂದ್ರು 8-10 ಜನರೊಂದಿಗೆ ಬಂದು, ಇನ್ನೊಮ್ಮೆ ಈ ಸ್ವತ್ತಿನ ಬಳಿ ಬಂದರೆ ಸುಮ್ಮನೆ ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇನೆ ಎಂದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಆ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದರೆ ನಿಮ್ಮನ್ನು ಸಾಯಿಸಿ ಇಲ್ಲೇ ಹೂತು ಹಾಕುತ್ತೇವೆ ಎಂದೂ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ತಮ್ಮ ದೂರನ್ನು ಸ್ವೀಕರಿಸಲಿಲ್ಲ ಎಂದು ಅವರು ಸಿಸಿಬಿ ಡಿಸಿಪಿಗೆ ದೂರು ನೀಡಿದ್ದಾರೆ.

    ವಿಜಯಾನಂದ ಫಸ್ಟ್​ಲುಕ್ ಬಿಡುಗಡೆ; ಡಾ. ವಿಜಯ ಸಂಕೇಶ್ವರ ಅವರ ರೋಚಕ ಕಥೆ ಈಗ ಬಯೋಪಿಕ್

    ಡಾ.ರಾಜಕುಮಾರ್-ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಅಪೂರ್ವ ಸಂಗಮ; ಜಂಟಿ ಹೋರಾಟಕ್ಕೂ ಸಜ್ಜಾದ ಅಭಿಮಾನಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts