ರೌಡಿ ಮನೆ, ಅಡ್ಡೆಗಳ ಮೇಲೆ ಸಿಸಿಬಿ ದಾಳಿ

Rowdies
Published on

ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಗಳ ನಿವಾಸ ಮತ್ತು ಅಡ್ಡೆಗಳ ಮೇಲೆ ಸಿಸಿಬಿ ದಾಳಿ ನಡೆಸಿ ನಿದ್ದೆಗೆಡಿಸಿ ಹೆಡೆಮುರಿಕಟ್ಟಿದ್ದಾರೆ.

ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಹತ್ಯೆ ಹಿಂದೆ ರೌಡಿಗಳ ದೊಡ್ಡ ಗ್ಯಾಂಗ್ ಇರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಹೆಚ್ಚಿನ ತನಿಖೆಯನ್ನು ಸಿಸಿಬಿ ರೌಡಿ ಸ್ಕ್ವಾಡ್ ಗೆ ವಹಿಸಲಾಗಿದೆ. ಶುಕ್ರವಾರ ಮುಂಜಾನೆ ಸಿಸಿಬಿ ಅಧಿಕಾರಿ ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗಾ, ಸೈಕಲ್ ರವಿ, ಸೈಲೆಂಟ್ ಸುನೀಲಾ ಮತ್ತು ಜೆ.ಸಿ.ಬಿ ನಾರಾಯಣ ಮತ್ತು ಸಹಚರರು ಸೇರಿದಂತೆ 45 ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಇತ್ತೀಚೆಗೆ ರೌಡಿ ಬಬ್ಲಿ ಬ್ಯಾಂಕ್ ಗೆ ಪತ್ನಿ, ಮಗು ಜತೆಗೆ ಬಂದಾಗ ರೌಡಿ ಗ್ಯಾಂಗ್ ದಾಳಿ‌ಮಾಡಿತ್ತು. ಪತ್ನಿ, ಮಗು ಮತ್ತು ಬ್ಯಾಂಕ್ ಗ್ರಾಹಕರು ಬೆಚ್ಚಿಬಿದ್ದಿದರು. ಕೃತ್ಯದ ಬಳಿದ ಹಂತಕರು ರಸ್ತೆಯಲ್ಲಿ ಲಾಂಗ್ ಮಚ್ಚು ಬೀಸಿ ಸಂಭ್ರಮಿಸಿದ್ದರು. ಈ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net