

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅನಧಿಕೃತವಾಗಿ ತಲೆ ಎತ್ತುವ ಕಟ್ಟಡಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಕೈಗೊಂಡಿದ್ದು, ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣ ಪತ್ರ (ಸಿಸಿ) ಹಾಗೂ ಸ್ವಾಧಿನಾನುಭವ ಪ್ರಮಾಣ ಪತ್ರ (ಒಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ) ಸೂಚನೆ ನೀಡಿವೆ.
ಇಂತಹ ಕಠಿಣ ನಿಮಯಗಳಿಂದ ಅನಧಿಕೃತ ಕಟ್ಟಡಗಳಿಗೆ ಬ್ರೇಕ್ ಬೀಳಲಿದೆ. ನಗರ ಹಾಗೂ ಗ್ರಾಮೀಣ ಸ್ಥಳಿಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಠಿಣ ಕಾನೂನು ಜಾರಿಗೆ ಬಂದಿದೆ. ಇದು ಮನೆ ಹಾಗೂ ಹಲವು ಬಗೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿರುವವರಿಗೆ ನಿಯಮಗಳ ಜಾಲದಲ್ಲಿ ಬೀಳುವಂತೆ ಮಾಡಿದೆ. ಅದರಲ್ಲೂ ಹೊಸ ಕಟ್ಟಡಗಳ ಜತೆಗೆ ಹಾಲಿ ಕಟ್ಟಡಗಳಿಗೂ ನಿಯಮ ಅನ್ವಯವಾಗಿದೆ. ಮತ್ತೊಂದೆಡೆ, ಕಟ್ಟಡ ಮಾಲೀಕರು ಸಿಸಿ ಮತ್ತು ಒಸಿ ದಾಖಲೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ, ಅನುಮೋದನೆಯೂ ಸಿಗದೆ ಒದ್ದಾಡುತ್ತಿದ್ದು, ಈ ಕಠಿಣ ನಿಯಮಗಳಿಂದಾಗಿ ನಿರ್ಮಾಣ ಕ್ಷೇತ್ರಕ್ಕೆ ತೊಡಕಾಗಿದೆ.
ಸುಪ್ರೀಂಕೋರ್ಟ್ ಆದೇಶ ನಕ್ಷೆ ಉಲ್ಲಂಘಿಸಿ ಅನಧಿಕೃತವಾಗಿ ನಿರ್ಮಿಸಿದ ಹಾಗೂ ನಿರ್ಮಿಸುವ ಕಟ್ಟಡಗಳನ್ನು ನಿರ್ನಾಮ ಮಾಡುವ ಸಲುವಾಗಿ ಕಳೆದ ಡಿ.17ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರು ಬೆಸ್ಕಾಂ ಹಾಗೂ ಜಲಮಂಡಳಿಗೆ ಪತ್ರ ಬರೆದು ಸಿ.ಸಿ., ಒ.ಸಿ. ಪಡೆಯದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಪೂರೈಸದಿರಲು ಮನವಿ ಮಾಡಿದ್ದರು. ಇದೀಗ ಸರ್ಕಾರಿ ಸಂಸ್ಥೆಗಳು ಹಂತ ಹಂತವಾಗಿ ನಿಯಮ ಜಾರಿಗೆ ತೊಡಗಿದೆ.
* ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರ (ಸಿಸಿ): ಅನುಮೋದಿತ ಯೋಜನೆಗಳ ಪ್ರಕಾರ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಪ್ರಮಾಣೀಕರಿಸುತ್ತದೆ.* ಸ್ಕೆಚ್ನೊಂದಿಗೆ ಸೈಟ್ ಪರಿಶೀಲನಾ ವರದಿ: ರೇಖಾಚಿತ್ರಗಳನ್ನು ಒಳಗೊಂಡಂತೆ ಈ ವಿವರವಾದ ವರದಿಯನ್ನು ಸೈಟ್ ಪರಿಶೀಲನೆಯ ನಂತರ ರಚಿಸಲಾಗುತ್ತದೆ. ಇದು ರಸ್ತೆಗಳು, ಜಲಮೂಲಗಳು, ಮಳೆಗಾಲದ ಚರಂಡಿಗಳಂತಹ ಸುತ್ತಮುತ್ತಲಿನ ಮೂಲಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ ಮತ್ತು ಕಟ್ಟಡವು ಅನುಮೋದಿತ ಯೋಜನೆಗೆ ಬದ್ಧವಾಗಿದೆ ಎಂದು ಖಚಿತಪಡಿಸುತ್ತದೆ.* ರಚನಾತ್ಮಕ ಸ್ಥಿರತೆ ಪ್ರಮಾಣಪತ್ರ (ಎಸ್ಎಸ್ಸಿ): ಪರವಾನಗಿ ಪಡೆದ ರಚನಾತ್ಮಕ ಇಂಜಿನಿಯರ್ನಿಂದ ನೀಡಲಾಗುವ ಈ ಪ್ರಮಾಣಪತ್ರವು ಕಟ್ಟಡವು ರಚನಾತ್ಮಕವಾಗಿ ಸದೃಢವಾಗಿದೆ ಮತ್ತು ಗಾಳಿ ಮತ್ತು ಭೂಕಂಪಗಳಂತಹ ಪರಿಸರ ಶಕ್ತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಪರಿಶೀಲಿಸುತ್ತದೆ.* ಅನುಮೋದಿತ ವಿನ್ಯಾಸ: ಸ್ಥಳಿಯ ಪ್ರಾಧಿಕಾರದಿಂದ ಅನುಮೋದಿಸಿದ ವಿವರವಾದ ಸೈಟ್ ವಿನ್ಯಾಸ ಯೋಜನೆಯನ್ನು ಒಳಗೊಂಡಿರುವ ದಾಖಲೆ, ನಿಮಾರ್ಣವು ಒಟ್ಟಾರೆ ಮಾಸ್ಟರ್ ಪ್ಲಾನ್ ಮತ್ತು ವಲಯ ನಿಯಮಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.ಒಸಿಗೆ ಅರ್ಜಿ ಸಲ್ಲಿಸಲು, ಡೆವಲಪರ್ ಸ್ಥಳಿಯ ಪುರಸಭೆ ಪ್ರಾಧಿಕಾರ ಅಥವಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಲವು ದಾಖಲೆಗಳನ್ನು ಸಲ್ಲಿಸಬೇಕು.ಒ.ಸಿ. ಪಡೆಯುವುದು ಹೇಗೆ?