

ಕೆ.ಆರ್.ಸಾಗರ: ತಿ.ನರಸೀಪುರ ತಾಲೂಕಿನ ಕೆಂಪನಪುರ ಗ್ರಾಮದಲ್ಲಿ ನಡೆದ ಅಂತರ ಜಿಲ್ಲಾ ಸ್ನೇಹ ಪೂರ್ವಕ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಂಡ್ಮಿಂಟನ್ ಕ್ಲಬ್ ವಿಜೇತರಾಗಿ ಚಾಂಪಿಯನ್ ಪಟ್ಟ ಪಡೆದಿದೆ.
ಸೆ.1ರಂದು ನಡೆದ ಈ ಪಂದ್ಯಾವಳಿಯಲ್ಲಿ 5 ಜಿಲ್ಲೆಗಳಿಂದ 22 ತಂಡಗಳು ಭಾಗವಹಿಸಿದ್ದವು. ನಾಕೌಟ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಫೈನಲ್ ಪಂದ್ಯಾವಳಿಯಲ್ಲಿ ಕೆಂಪನಪುರದ ಯೋಗಿ ಬಾಯ್ಸ ವಿರುದ್ಧ ಕೆ.ಆರ್.ಸಾಗರದ ಕಾವೇರಿ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ನಡುವೆ ನಡೆದು 2-0(35-29, 35-18) ನೇರ ಸೆಟ್‌ಗಳ ಜಯವನ್ನು ಕಾವೇರಿ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.
ಎಸ್.ರವಿಕುಮಾರ್ ಹಾಗೂ ಯಶವಂತ್ ಪಂದ್ಯಾವಳಿಯ ಎಲ್ಲ ಪಂದ್ಯಗಳಲ್ಲಿ ಅತ್ಯುತ್ತಮ ಆಟವಾಡಿ ಪ್ರೇಕ್ಷರ ಮೆಚ್ಚುಗೆ ಪಡೆದರು.