

ಕೆ.ಎಂ.ದೊಡ್ಡಿ: ಹನುಮಂತನಗರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆ.24 ರಿಂದ ಶ್ರೀ ಆತ್ಮಲಿಂಗೇಶ್ವರ ಭಾರಿ ದನಗಳ ಜಾತ್ರೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ಶಿವರಾತ್ರಿ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಫೆ.24 ರ ಬೆಳಗ್ಗೆ 6.45ಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ದೊರೆಯಲಿದೆ. ಫೆ.25, 26 ಹಾಗೂ 27ರಂದು ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಫೆ.28 ರಂದು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ವಿಶೇಷ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, 2 ಗಂಟೆಗೆ ಚತುರ್ವೀಧಿಗಳಲ್ಲಿ ರಥೋತ್ಸವ ಜರುಗಲಿದೆ. ಅದೇ ದಿನ ಸಂಜೆ 4.30ಕ್ಕೆ ಎಪಿಎಂಸಿ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು.
ಮಾ.1ರಂದು ತೆಪ್ಪೋತ್ಸವ: ದೇವಾಲಯ ಆವರಣದಲ್ಲಿರುವ ಪಾವನಗಂಗಾದಲ್ಲಿ ಮಾ.1ರಂದು ಸಂಜೆ 6.50 ರಿಂದ ರಾತ್ರಿ 8 ಗಂಟೆಯವರೆಗೆ ತೆಪ್ಪೋತ್ಸವ, 8.15ಕ್ಕೆ ದೇವಾಲಯ ಪ್ರಾಂಗಣದಲ್ಲಿ ಶಯನೋತ್ಸವ ದಾರ್ಮಿಕ ಕಾರ್ಯಕ್ರಮಗಳು ಮತ್ತು ಭರತನಾಟ್ಯ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಶ್ರೀ ಆತ್ಮಲಿಂಗೇಶ್ವರ ದೆೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದ್ದಾರೆ.