ಸಂತೆ, ದನಗಳ ಸಂತೆ, ಜಾತ್ರೆ ನಿಷೇಧಿಸಿ DC ಆದೇಶ

Devalapura Jawari Cows
ದೇವಲಾಪುರ ಗ್ರಾಮದ ಗದ್ದೆಯೊಂದರಲ್ಲಿ ಹುಲ್ಲು ಮೇಯುತ್ತಿರುವ ಆಕಳ ಹಿಂಡು.
Published on
ಯಾದಗಿರಿ  : ಯಾದಗಿರಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳ ಉಪ ಚುನಾವಣೆ ನಿಮಿತ್ಯ 2024ರ ಡಿಸೆಂಬರ್ 8 ರಂದು ನಡೆಯಲಿದೆ ಸಂತೆ, ದನಗಳ ಸಂತೆ ಮತ್ತು ಜಾತ್ರೆ ನಿಷೇಧಿಸಿ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೊರಡಿಸಿದ್ದಾರೆ.

ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ 1993ರ ನಿಯಮ 36ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2024ರ ಡಿಸೆಂಬರ್ 8ರ ಭಾನುವಾರ ರಂದು ಸುರಪುರ, ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತ 17 ಕರಡಕಲ್, 18 ಕಿರದಳ್ಳಿ ಕ್ಷೇತ್ರಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಗ್ರಾಮ ಪಂಚಾಯತಿಗಳ ಸ್ಥಳದಲ್ಲಿ, ಪ್ರದೇಶದಲ್ಲಿ ಅಂದು ಸಂತೆ, ದನಗಳ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net