

ಕಾಸರಗೋಡು: ಓಣಂ ಹಬ್ಬ ಕೃಷಿ ಸಂಸ್ಕೃತಿಯ ಪ್ರತಿಕವಾಗಿದ್ದು, ಜಾತಿ, ಧರ್ಮಕ್ಕೆ ಅತೀತವಾಗಿ ಆಚರಿಸುವ ಸಂಭ್ರಮದ ಹಬ್ಬ. ಆಶ್ರಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕೆ.ಎಸ್.ಎಸ್.ಪಿ.ಯು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕುಂಞಂಬು ನಾಯರ್ ಹೇಳಿದರು.
ಶ್ರೀ ಸಾಯಿ ನಿಕೇತನ ಸೇವಾ ಸಂಸ್ಥೆಯಲ್ಲಿ ಕೇರಳ ಸ್ಟೇಟ್ ಸರ್ವಿಸ್ ಫೆನ್ಶನರ್ ಯೂನಿಯನ್ ಮಂಜೇಶ್ವರ ಟಕದ ವತಿಯಿಂದ ಓಣಂ ಹಬ್ಬದ ಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಯಿನಿಕೇತನ ಸಂಸ್ಥೆಯ ಅಧ್ಯಕ್ಷ ಡಾ.ಉದಯಕುಮಾರ್ ಹಾಗೂ ಡಾ.ಶಾರದಾ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಸದಸ್ಯ ಈಶ್ವರ್ ಯೋಗದ ಬಗ್ಗೆ ಉಪನ್ಯಾಸ ನೀಡಿದರು.
ಹಾಡುಗಾರಿಕೆ, ಮಿಮಿಕ್ರಿ, ಹರಟೆ, ಇನ್ನಿತರ ಕಾರ್ಯಕ್ರಮಗಳ ಮೂಲಕ ಆಶ್ರಮವಾಸಿಗಳನ್ನು ಸಂದ ಪದಾಧಿಕಾರಿಗಳು ಮನರಂಜಿಸಿದರು. ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದಾ, ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಶ್ರಮದ ಸಿಬ್ಬಂದಿ ಸಹಕರಿಸಿದರು. ಘಟಕದ ಕಾರ್ಯದರ್ಶಿ ಎ.ಶೀನಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಶ್ರೀಕುಮಾರಿ ವಂದಿಸಿದರು.