ಜಾತಿ ಜನಗಣತಿ ಜಾರಿ ಆಗಲಿ ಎಂದ ಕೇಂದ್ರ ಸಚಿವ

Narayana swamy_Caste
Published on

ತುಮಕೂರು: ಜಾತಿ ಜನಗಣತಿ ಜತೆಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಅವಶ್ಯವಿದೆ. ಪದೇಪದೇ ಮಾಧ್ಯಮಗಳ ಮುಂದೆ ಹೇಳುವುದು ಶೋಭೆ ತರುವುದಿಲ್ಲ. ಬದ್ಧತೆ ಇದ್ದರೆ ಜಾತಿ ಜನಗಣತಿ ಜಾರಿ ಮಾಡಲಿ ಎಂದು ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸವಾಲು ಹಾಕಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮೊದಲೇ ಜಾತಿ ಜನಗಣತಿ ಜಾರಿ ತರುವುದಾಗಿ ಹೇಳಿದ್ದರು. ಜಾತಿ ಗಣತಿಗೆ 1160 ಕೋಟಿ ಖರ್ಚು ಮಾಡಲಾಗಿದೆ. ಕಾಂತರಾಜು ವರದಿ ಮೂಲ ಪ್ರತಿ ನಾಪತ್ತೆಯಾಗಿದೆ ಎಂಬ ಚರ್ಚೆ ಎಲ್ಲೆಡೆ ಆಗುತ್ತಿದೆ. ಖಜಾನೆಯಲ್ಲೊ ಅಥವಾ ಕಚೇರಿಯಲ್ಲಿ ನಾಪತ್ತೆ ಆಯಿತಾ? ಯಾರ ಸುಪರ್ದಿಯಲ್ಲಿದ್ದಾಗ ಮೂಲ ಪ್ರತಿ ನಾಪತ್ತೆ ಆಯಿತು ಅನ್ನುವ ಬಗ್ಗೆ ತನಿಖೆಗೆ ಆದೇಶ ಮಾಡಲಿಲ್ಲ. ದೂರ ಸಹ ದಾಖಲಾಗಿಲ್ಲ. ಇದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸವಷ್ಟೇ. ವರದಿಗಳನ್ನು ಸದನದಲ್ಲಿ ಚರ್ಚೆ ನಡೆಸಬೇಕು. ತಪ್ಪಾಗಿದ್ದರೆ ಸರಿಪಡಿಸುವ ಕೆಲಸ ಆಗಲಿ ಎಂದು ಸಲಹೆಯಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net