

* ಆರಂಭದಲ್ಲೇ ತಡೆ ಉಂಟಾದರೂ 10.60 ಲಕ್ಷ ಜನರ ಸಮೀಕ್ಷೆ
ರಾಮನಗರ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯು ಶೇ.91.17 ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿ ಅಂದಾಜು 11.6 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ 10.60 ಲಕ್ಷ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಒಟ್ಟಾರೆಯಾಗಿ ಶೇ.91.17 ಸಮೀಕ್ಷೆಯಾಗಿದೆ.
ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಸಮೀಕ್ಷೆ ಆರಂ‘ಗೊಂಡ ಸಮೀಕ್ಷೆ ಕಾರ್ಯ ಅ.7ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ, ಸಮೀಕ್ಷೆ ಪ್ರಮಾಣ ಕಡಿಮೆ ಆಗಿದ್ದ ಕಾರಣ ಹೆಚ್ಚಿನ ಕಾಲಾವಕಾಶ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅ.18ವರೆಗೆ ಸಮೀಕ್ಷೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರೊಂದಿಗೆ ಸಮೀಕ್ಷೆ ಅಂತಿಮ ದಿನವಾದ ಅ.18ಕ್ಕೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 10,57,628 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.
ಜಿಲ್ಲೆಯಾದ್ಯಂತ ಅಂದಾಜು 3.60 ಲಕ್ಷ ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿತ್ತು. ಸಮೀಕ್ಷೆ ಆರಂ‘ಕ್ಕೂ ಮುನ್ನ ಪ್ರತಿ ಮನೆಗೆ ಜಿಯೋ ಟ್ಯಾಗಿಂಗ್ ಕಾರ್ಯವನ್ನು ವಿದ್ಯುತ್ ಮೀಟರ್ ರೀಡರ್‌ಗಳು, ಗ್ರಾಮ ಆಡಳಿತಾಧಿಕಾರಿ ಹಾಗೂ ಇತರ ಸಿಬ್ಬಂದಿ ಪೂರ್ಣಗೊಳಿಸಿದ್ದರು. ಇಂತವುದರಲ್ಲಿ ಕೆಲವು ರೆಸಾರ್ಟ್‌ಗಳು, ತೋಟದ ಮನೆ ಸೇರಿ ವಾಸವಿಲ್ಲದ ಮನೆಗಳಿಗೂ ಜಿಯೋ ಟ್ಯಾಂಗಿಗ್ ಮಾಡಲಾಗಿದೆ. ಇದರ ಪ್ರಮಾಣ ಜಿಲ್ಲೆಯಲ್ಲಿ ಶೇ.10ರಷ್ಟಿದೆ. ಇಂತಹವುಗಳ ಡಿಲೀಟೀಕರಣಕ್ಕೂ ಸಹ ಸರ್ಕಾರ ಅನುಮತಿ ನೀಡಿತ್ತು, ಇದರೊಂದಿಗೆ ಜಿಲ್ಲೆಯಲ್ಲಿ ಸಮೀಕ್ಷೆ ಪ್ರಮಾಣ ಶೇ.91.17 ಆಗಿದೆ.
ಜಿಲ್ಲೆಯಲ್ಲಿ 3,164 ಬ್ಲಾಕ್ ಗುರುತಿಸಲಾಗಿತ್ತು. ಇದರಲ್ಲಿ ಒಟ್ಟು 3,52,096 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿವ ಗುರಿ ಹೊಂದಲಾಗಿತ್ತು. ಅಂದಾಜು 11,60,015 ಮಂದಿ ಸಮೀಕ್ಷೆಗೆ ಒಳಪಡಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದರಲ್ಲಿ ಒಟ್ಟಾರೆ 3,06,550 ಕುಟುಂಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, 10,57,628 ಮಂದಿ ಸಮೀಕ್ಷಾ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಒಟ್ಟಾರೆ ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಮೀಕ್ಷೆ ರಾಮನಗರ ತಾಲೂಕಿನಲ್ಲಿ ಆಗಿದ್ದು, ಇಲ್ಲಿ ಶೇ.98, ಹಾರೋಹಳ್ಳಿಯಲ್ಲಿ ಶೇ.93, ಚನ್ನಪಟ್ಟಣದಲ್ಲಿ ಶೇ.92, ಮಾಗಡಿಯಲ್ಲಿ ಶೇ.91 ಮತ್ತು ಕನಕಪುರದಲ್ಲಿ ಶೇ. 82 ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ನಿಗದಿತ ಅವಧಿಗೆ ಮುಂಚಿತವಾಗಿಯೇ ಸಮೀಕ್ಷೆ ಗುರಿಯನ್ನು ಸಾಧಿಸಿದ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಶಾಂತಮ್ಮ ಅವರನ್ನು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಪ್ರಶಂಸನಾ ಪತ್ರ, ನಗದು ನೀಡಿ ಅಭಿನಂದಿಸಿದ್ದರು. ಸಮೀಕ್ಷೆಗಾಗಿ ಚನ್ನಪಟ್ಟಣ ತಾಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಹಾಗೂ ಗೋವಿಂದೇಗೌಡನದೊಡ್ಡಿಯಲ್ಲಿ 86 ಮನೆಗಳ ಸಮೀಕ್ಷಾ ಗುರಿಯನ್ನು ಶಾಂತಮ್ಮ ಅವರಿಗೆ ನೀಡಲಾಗಿತ್ತು. ಈ ಕಾರ್ಯವನ್ನು ಕೇವಲ 7 ದಿನಗಳಲ್ಲಿಯೇ ಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಚೇರಿಗೆ ಕರೆಸಿಕೊಂಡು ಅವರಿಗೆ ಪ್ರಶಂಸನಾ ಪತ್ರ ನೀಡುವ ಜತೆಗೆ, ವೈಯಕ್ತಿವಾಗಿ 1,001 ರೂ. ನಗದು ಬಹುಮಾನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತಾಲೂಕುವಾರು ಪ್ರಗತಿ
ತಾಲೂಕು ಬ್ಲಾಕ್‌ಗಳು ಕುಟುಂಬಗಳು ಜನ ಸಂಖ್ಯೆ ಪಾಲ್ಗೊಂಡವರು ಶೇಖಡವಾರು
ಚನ್ನಪಟ್ಟಣ 671 76,102 2,79,980 2,57,039 91.81
ಹಾರೋಹಳ್ಳಿ 329 37,653 1,01,375 94,192 92.91
ಕನಕಪುರ 746 78797 2,74,580 2,25,495 82.12
ಮಾಗಡಿ 551 61,000 2,18,410 1,99,536 91.36
ರಾಮನಗರ 867 98,544 2,85,670 2,81,366 98.49
ಒಟ್ಟು 3,164 3,52,096 11,60,015 10,57,628 91.17
===
ಆರಂಭಿಕ ಕೆಲ ಸಮಸ್ಯೆಗಳ ಹೊರತಾಗಿ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಉತ್ತಮವಾಗಿದೆ ನಡೆದಿದೆ. ಕೊನೇ ದಿನದ ಅಂತ್ಯಕ್ಕೆ ಶೇ.91.17 ಸಮೀಕ್ಷೆ ಪ್ರಗತಿ ಆಗಿದೆ.ಬಿಲಾಲ್ ಮಹಮದ್ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಬೆಂಗಳೂರು ದಕ್ಷಿಣ ಜಿಲ್ಲೆ